alex Certify ಅತಿಯಾದ ಮಾಂಸ ಸೇವನೆ ಅಪಾಯಕಾರಿ….! ಅದರ ದುಷ್ಪರಿಣಾಮಗಳೇನು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅತಿಯಾದ ಮಾಂಸ ಸೇವನೆ ಅಪಾಯಕಾರಿ….! ಅದರ ದುಷ್ಪರಿಣಾಮಗಳೇನು ಗೊತ್ತಾ ?

ಭಾರತದಲ್ಲಿ ಶೇಕಡಾ 70 ಕ್ಕಿಂತ ಹೆಚ್ಚು ಜನರು ಮಾಂಸಾಹಾರಿಗಳು. ಅದಕ್ಕಾಗಿಯೇ  ದೇಶದಲ್ಲಿ ಮಾಂಸದ ಸೇವನೆಯು ತುಂಬಾ ಹೆಚ್ಚಾಗಿದೆ. ಜನರು ಬಗೆಬಗೆಯ ಮಾಂಸದ ಭಕ್ಷ್ಯಗಳನ್ನು ಸೇವಿಸಲು ಇಷ್ಟಪಡುತ್ತಾರೆ. ಮಾಂಸಾಹಾರದಲ್ಲಿ ಪ್ರೋಟೀನ್‌ ಸಮೃದ್ಧವಾಗಿರುತ್ತದೆ. ಅದು ದೇಹ ಮತ್ತು ಸ್ನಾಯುಗಳಿಗೆ ಶಕ್ತಿ ನೀಡುತ್ತದೆ.

ಆದರೆ ಪ್ರೋಟೀನ್ ಪಡೆಯಲು ಮಾಂಸವನ್ನು ಅವಲಂಬಿಸುವುದು ಸರಿಯಲ್ಲ. ಕೆಲವರು ನಾನ್ ವೆಜ್ ತಿನ್ನದೇ ಇರಲು ಸಾಧ್ಯವೇ ಇಲ್ಲ ಎಂಬ ಮನಸ್ಥಿತಿ ಹೊಂದಿರುತ್ತಾರೆ. ದಿನನಿತ್ಯ ಮಾಂಸ ಸೇವಿಸುತ್ತಾರೆ. ಇದರಿಂದ ದೇಹಕ್ಕೆ ಹಾನಿಯಾಗುತ್ತದೆ.

ಸಸ್ಯ ಮೂಲದ ಪ್ರೋಟೀನ್‌ಗಿಂತ, ಪ್ರಾಣಿ ಮೂಲದ ಪ್ರೋಟೀನ್ ಅನ್ನು ಸೇವಿಸುವುದು ಆರೋಗ್ಯಕ್ಕೆ ಅಪಾಯಕಾರಿ. ಏಕೆಂದರೆ ಅದು ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತದೆ. ಮಾಂಸ ಸೇವನೆಯನ್ನು ನಿಯಂತ್ರಿಸಲು ಸಾಧ್ಯವಾಗದವರಿಗೆ  ಮೂಳೆ ಮುರಿತ ಮತ್ತು ಆಸ್ಟಿಯೊಪೊರೋಸಿಸ್ ಅಪಾಯವು ಗಮನಾರ್ಹವಾಗಿ ಹೆಚ್ಚಾಗುತ್ತದೆ. ತಜ್ಞರು ಹೇಳುವ ಪ್ರಕಾರ, ಮೂಳೆಗಳ ಆರೋಗ್ಯಕ್ಕೆ ಪ್ರೋಟೀನ್ ಅಗತ್ಯ, ಆದರೆ ಹೆಚ್ಚು ಪ್ರಾಣಿ ಆಧಾರಿತ ಪ್ರೋಟೀನ್, ವಿಶೇಷವಾಗಿ ಕೆಂಪು ಮಾಂಸವು ನಿಮ್ಮ ಮೂಳೆಗಳಿಗೆ ಹಾನಿ ಮಾಡುತ್ತದೆ.

ಅದಕ್ಕಾಗಿಯೇ ನಾವು ನಮ್ಮ ಆಹಾರದಲ್ಲಿ ಡೈರಿ, ಮೀನು, ಕೋಳಿ ಮತ್ತು ಸಸ್ಯ ಆಧಾರಿತ ಪ್ರೋಟೀನ್ ಮೂಲಗಳನ್ನು ಸೇರಿಸಿಕೊಳ್ಳಬೇಕು. ಸಾಕಷ್ಟು ಹಣ್ಣು, ತರಕಾರಿಗಳು ಮತ್ತು ಧಾನ್ಯಗಳೊಂದಿಗೆ ಸಮತೋಲನಗೊಳಿಸಲು ಮರೆಯಬೇಡಿ. ಹೆಚ್ಚಿನ ಪ್ರೋಟೀನ್ ಆಹಾರವು ನಮ್ಮ ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ಕ್ಯಾಲ್ಸಿಯಂ ಕೊರತೆಯನ್ನು ಉಂಟುಮಾಡಬಹುದು. ವಾಸ್ತವವಾಗಿ  ನಮ್ಮ ರಕ್ತವು ಕೆಂಪು ಮಾಂಸದಿಂದ ಆಮ್ಲೀಯವಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ಮೂಳೆಗಳಲ್ಲಿ ಕ್ಯಾಲ್ಷಿಯಂ ಅಂಶ ಕಡಿಮೆಯಾಗುತ್ತದೆ. ಈ ಕಾರಣದಿಂದಾಗಿ ನಾವು ಮಾಂಸವನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...