ಅಜ್ಜಿ ಅಡುಗೆ ! ಅದರ ಗಮ್ಮತ್ತೇ ಬೇರೆ ಬಿಡಿ. ಅಡುಗೆಯ ಹದವೇ ಹಸಿವನ್ನು ಹೆಚ್ಚಿಸುತ್ತಿತ್ತು, ಸುವಾಸನೆಯಂತೂ ಬೇಗನೇ ಊಟ ಮಾಡಲೇಬೇಕು ಎನಿಸುವಂತೆ ಇರುತ್ತಿತ್ತು. ಆಗ ಇದ್ದ ಒಲೆ, ಉಪ್ಪು, ಹುಣಸೇಯಲ್ಲೇ ಅಜ್ಜಿ ರುಚಿಯಾದ ಊಟ ಉಣಬಡಿಸುತ್ತಿದ್ದರು. ಇವತ್ತು ನಾವು ನಿಮಗೆ ಅಜ್ಜಿ ಕಾಲದ ಅಪ್ಪಟ ದೇಸಿ ರುಚಿಯ ಬೆಳ್ಳುಳ್ಳಿ ಕಲಸಿದ ಅನ್ನ ಮಾಡುವುದು ಹೇಗೆ ಅನ್ನೊದನ್ನ ತಿಳಿಸಿಕೊಡ್ತೀವಿ. ನೀವು ಒಮ್ಮೆ ಟ್ರೈ ಮಾಡಿ.
ಮೊದಲಿಗೆ ಒಂದು ಬಾಣಲಿಗೆ 2 ಸ್ಪೂನ್ ಕೊಬ್ಬರಿ ಎಣ್ಣೆ ಹಾಕಿಕೊಳ್ಳಬೇಕು. ಇದಕ್ಕೆ ಒಂದು ಚಮಚ ಸಾಸಿವೆ ಹಾಕಿ ಚಿಟಪಟಾಯಿಸಿ. ನಂತರ ಒಂದು ಸ್ಪೂನ್ ಉದ್ದಿನ ಬೇಳೆ ಹಾಕಿ ಫ್ರೈ ಮಾಡಿಕೊಳ್ಳಿ. ಬಳಿಕ ಒಂದು ಸ್ಪೂನ್ ಜೀರಿಗೆ ಸೇರಿಸಿ ಹುರಿದುಕೊಳ್ಳಿ. ಆ ನಂತರ ಎರಡು ಗೆಡ್ಡೆ ಬೆಳ್ಳುಳ್ಳಿ ಎಸಳನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು. ಆ ನಂತರ ಕಾಲು ಚಮಚ ಅರಿಶಿನ, 5-6 ಖಾರಕ್ಕೆ ಅಗತ್ಯವಾದಷ್ಟು ಹಸಿ ಮೆಣಸಿನಕಾಯಿ ಹಾಕಿ ಫ್ರೈ ಮಾಡಿಕೊಳ್ಳಬೇಕು.
ಬಳಿಕ ಒಂದು ಮುಷ್ಟಿಯಷ್ಟು ತೆಂಗಿನ ತುರಿ ಹಾಕಿಕೊಳ್ಳಬೇಕು. ಇದನ್ನು ಮಿಶ್ರಣ ಮಾಡಿದ ಬಳಿಕ ಒಂದು ನಿಂಬೆ ಹಣ್ಣಿನ ರಸ ಸೇರಿಸಿ ಮಿಕ್ಸ್ ಮಾಡಿಕೊಳ್ಳಬೇಕು. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಹದವಾಗಿ ಎಲ್ಲವನ್ನೂ ಬೆರೆಸಿಕೊಳ್ಳಿ.
ತಂದೆ ಸೆಕೆಂಡ್ ಹ್ಯಾಂಡ್ ಸೈಕಲ್ ಖರೀದಿಸಿದ್ದಕ್ಕೆ ಖುಷಿಯಿಂದ ಕುಪ್ಪಳಿಸಿದ ಪುಟ್ಟ ಬಾಲಕ: ಹೃದಯಸ್ಪರ್ಶಿ ವಿಡಿಯೋ ವೈರಲ್
ಈಗ ಒಂದು ಬಾಣಲಿಗೆ ಬಿಸಿ ಅನ್ನವನ್ನು ಹರಡಿಕೊಳ್ಳಬೇಕು. ಇದಕ್ಕೆ ಬೆಳ್ಳುಳ್ಳಿ ಒಗ್ಗರಣೆ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಬೇಕು. ಗೊಜ್ಜು ಅನ್ನ ಚೆನ್ನಾಗಿ ಮಿಕ್ಸ್ ಆದ ಬಳಿಕ ಸ್ವಲ್ಪ ಕೊತ್ತಂಬರಿ ಹಾಕಿದರೆ ಬೆಳ್ಳುಳ್ಳಿ ಕಲಸಿದ ಅನ್ನ ಸವಿಯಲು ಸಿದ್ಧ.
ಆಗಿನ ಕಾಲದಲ್ಲಿ ಖಾರ ತಿನ್ನಬೇಕು ಅನಿಸಿದಾಗ ಅಜ್ಜಿ ಥಟ್ಟನೇ ಮಾಡುತ್ತಿದ್ದ ಬೆಳ್ಳುಳ್ಳಿ ಒಗ್ಗರಣೆ ಅನ್ನ ಇಂದಿನ ಮಕ್ಕಳಿಗೂ ಪ್ರಿಯವಾಗೋದ್ರಲ್ಲಿ ಅನುಮಾನವೇ ಇಲ್ಲ.