alex Certify ʼಸಂಗಾತಿʼ ಕುರಿತ ಪ್ರಶ್ನೆಗೆ ಹಾಟ್‌ ಉತ್ತರ ನೀಡಿದ ಮಲೈಕಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಸಂಗಾತಿʼ ಕುರಿತ ಪ್ರಶ್ನೆಗೆ ಹಾಟ್‌ ಉತ್ತರ ನೀಡಿದ ಮಲೈಕಾ

ʼಚಯ್ಯ ಚಯ್ಯʼ ಹಾಡಿನ ಮೂಲಕ ಬಾಲಿವುಡ್ ಗೆ ಕಾಲಿಟ್ಟ ಮಲೈಕಾ ಅರೋರಾ ಅತ್ಯಂತ ಹಾಟ್ ನಟಿಯಲ್ಲೊಬ್ಬಳು. ಈಕೆ ಸಾಮಾಜಿಕ ಜಾಲತಾಣದಲ್ಲಿ ಹಾಕುವ ಫೋಟೋ ತುಂಬಾ ಹಾಟ್ ಇರುತ್ತದೆ. ಇತ್ತೀಚೆಗೆ ರಿಯಾಲಿಟಿ ಷೋ ಒಂದರಲ್ಲಿ ಮತ್ತಷ್ಟು ಹಾಟ್ ಉತ್ತರ ಕೊಟ್ಟು ಮತ್ತೆ ಸುದ್ದಿಯಲ್ಲಿದ್ದಾಳೆ ಈ ಚೆಲುವೆ.

ಗೆಳೆಯನ​ ಜನ್ಮ ದಿನಕ್ಕೆ ವಿಶೇಷ ರೀತಿಯಲ್ಲಿ ಶುಭಕೋರಿದ ಮಲೈಕಾ ಅರೋರಾ..!

ಇವಳೊಟ್ಟಿಗೆ ಹೋಸ್ಟ್ ಆಗಿ ಕೆಲಸ ಮಾಡುತ್ತಿರುವ ಆಕರ್ಷಕ ಮಾಡೆಲ್ ಮತ್ತು ನಟ ಮಿಲಿಂದ್ ಸೋಮನ್, ಈಕೆಗೆ ಪುರುಷರಲ್ಲಿ ಯಾವ ಮೂರು ಗುಣಗಳು ಇದ್ದರೆ ಇಷ್ಟವಾಗುತ್ತದೆ ಎಂದು ಕೇಳಿದಾಗ, ಸಂಕೋಚವಿಲ್ಲದೆ ಮಲೈಕಾ, ಅವನಿಗೆ ಪೂರ್ತಿ ಶೇವ್ ಮಾಡಿರದೆ ಸ್ವಲ್ಪ ಗಡ್ಡವಿರಬೇಕು, ಸ್ವಲ್ಪ ಫ್ಲರ್ಟ್ ಆಗಿರಬೇಕು ಹಾಗೂ ಅತ್ಯಂತ ಸೊಗಸಾಗಿ ಚುಂಬಿಸುವನು ಆಗಿರಬೇಕು ಎಂದು ಹೇಳಿಕೊಂಡಿದ್ದಾರೆ.

ಯಾವ ಗುಣ ಇಷ್ಟ ಆಗುವುದೇ ಇಲ್ಲ ಎಂಬ ಪ್ರಶ್ನೆಗೆ, ಗಾಸಿಪ್ ಮಾಡುವವನು ಎಂದು ಹೇಳಿದ್ದಾರೆ. ಅರ್ಜುನ್ ಕಪೂರ್ ಜೊತೆಗೆ ಪ್ರಣಯ ಪಕ್ಷಿಯಾಗಿ ಎಲ್ಲೆಡೆ ಹಾರಾಡುತ್ತಿರುವ ಮಲೈಕಾಗೆ, ಅರ್ಜುನ್ ಮೊಬೈಲಿಗೆ ನೀನು ಕಳಿಸಿದ ಕೊನೆಯ ಮೆಸೇಜ್ ಏನು ಎಂಬ ಪ್ರಶ್ನೆಗೆ ನಾನು ಕೂಡ ನಿನ್ನನ್ನು ಪ್ರೀತಿಸುತ್ತೇನೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...