alex Certify
ಕನ್ನಡ ದುನಿಯಾ
       

Kannada Duniya

ರಾತ್ರಿ ಕಾಡುವ ಕೆಮ್ಮಿಗೆ ಇಲ್ಲಿದೆ ʼಮನೆ ಮದ್ದುʼ

ವಾತಾವರಣದ ಬದಲಾವಣೆಯಿಂದಾಗಿ ಶೀತ, ನೆಗಡಿ, ಕೆಮ್ಮು ಕಾಣಿಸಿಕೊಳ್ಳುತ್ತದೆ. ಕೆಲವರು ದಿನಪೂರ್ತಿ ಆರೋಗ್ಯವಾಗಿರ್ತಾರೆ. ರಾತ್ರಿಯಾದ್ರೆ ಕೆಮ್ಮು ಕಾಣಿಸಿಕೊಳ್ಳುತ್ತದೆ. ಇದ್ರಿಂದ ನಿದ್ರೆ ಸರಿಯಾಗಿ ಬರುವುದಿಲ್ಲ. ಜೊತೆಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ. ನಿಮಗೂ ರಾತ್ರಿ ಕೆಮ್ಮು ಕಾಡ್ತಾ ಇದ್ದರೆ ಈ ಮದ್ದು ಬಳಸಿ ಆರಾಮಾಗಿ ನಿದ್ರೆ ಮಾಡಿ.

ಗಾರ್ಗಲ್ : ರಾತ್ರಿ ಮಲಗುವ ಮೊದಲು ಉಗುರು ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸಿ. ಗಾರ್ಗಲ್ ಮಾಡುವುದರಿಂದ ಗಂಟಲಿನಲ್ಲಿ ಕಾಣಿಸಿಕೊಳ್ಳುವ ನೋವು ಕಡಿಮೆಯಾಗುತ್ತದೆ. ಕೆಮ್ಮು ಬರುವುದಿಲ್ಲ.

ಹರ್ಬಲ್ ಟೀ : ಕೆಮ್ಮಿಗೆ ಅಲರ್ಜಿ ಕೂಡ ಕಾರಣ. ಪ್ರತಿ ದಿನ ರಾತ್ರಿ ಮಲಗುವ ಮೊದಲು ಹರ್ಬಲ್ ಟೀ ಕುಡಿಯುವುದರಿಂದ ಕೆಮ್ಮು ಕಡಿಮೆಯಾಗುತ್ತದೆ. ಜೊತೆಗೆ ಸುಖ ನಿದ್ರೆ ನಿಮ್ಮದಾಗುತ್ತದೆ.

ಮಲಗುವ ವಿಧಾನ ಬದಲಿಸಿ : ರಾತ್ರಿ ಮಗ್ಗಲು ಬದಲಾಯಿಸುತ್ತಿರಿ. ಒಂದೇ ಮಗ್ಗಲಿನಲ್ಲಿ ಮಲಗುವುದರಿಂದ ಕೆಮ್ಮು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮಲಗುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಳ್ಳಿ.

ರಾತ್ರಿ ಮೊಸರು ಬೇಡ : ಊಟದಲ್ಲಿಯೂ ಬದಲಾವಣೆ ತನ್ನಿ. ರಾತ್ರಿ ಮೊಸರು ಬಳಸಬೇಡಿ. ಜೀರ್ಣ ಕ್ರಿಯೆ ಸರಿಯಾಗಿ ಆಗದೆ ಕೆಮ್ಮು ಕಾಣಿಸಿಕೊಳ್ಳುತ್ತದೆ.

ಬೆಚ್ಚಗಿನ ನೀರು ಸೇವಿಸಿ : ಚಳಿಗಾಲದಲ್ಲಿ ಬೆಚ್ಚಗಿನ ನೀರು ಸೇವನೆ ಮಾಡುವುದು ಬಹಳ ಒಳ್ಳೆಯದು. ಇದ್ರಿಂದ ಗಂಟಲು ನೋವು ಕಡಿಮೆಯಾಗುವ ಜೊತೆಗೆ  ಕೆಮ್ಮು ಕಡಿಮೆಯಾಗುತ್ತದೆ.

ವೈದ್ಯರ ಸಲಹೆ : ಒಂದು ವಾರಕ್ಕಿಂತ ಹೆಚ್ಚು ದಿನ ಕೆಮ್ಮು ಕಾಡಿದ್ರೆ ವೈದ್ಯರ ಬಳಿ ಹೋಗುವುದು ಒಳ್ಳೆಯದು.

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...