ದೃಷ್ಟಿಭ್ರಮೆಯ ವಿಡಿಯೋಗಳೇ ಹಾಗೆ ಅವು ನಿಮ್ಮ ಮೆದುಳಿಗೆ ಕೈ ಹಾಕದೇ ಇರದು. ಮನಶಾಸ್ತ್ರಜ್ಞೆಯೊಬ್ಬರು ಇಂತಹದ್ದೇ ಒಂದು ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು ಇದನ್ನ ನೋಡಿದ ನೆಟ್ಟಿಗರು ತಲೆ ಕೆಡಿಸಿಕೊಂಡಿದ್ದಾರೆ.
ಹ್ಯಾಂಪ್ಸ್ಪೈರ್ನ ಡಾ. ಜ್ಯೂಲಿ ಸ್ಮಿತ್ ಈ ದೃಷ್ಟಿಭ್ರಮೆಯ ವಿಡಿಯೋವನ್ನ ಶೇರ್ ಮಾಡಿದ್ದಾರೆ. ವಿಡಿಯೋದಲ್ಲಿ ಸ್ಮಿತ್ ತಲೆಯ ಮೇಲೆ ಗುಣಾಕಾರ ಆಕಾರದ ಚಿಹ್ನೆಯನ್ನ ಅಂಟಿಸಿಕೊಂಡಿದ್ದು ಗಾರ್ಡನ್ ಒಂದರಲ್ಲಿ ಕೂತಿದ್ದಾರೆ.
ಈ ಸಂಪೂರ್ಣ ದೃಶ್ಯವನ್ನ ಬ್ಲಾಕ್ & ವೈಟ್ನಲ್ಲಿ ಚಿತ್ರೀಕರಿಸಲಾಗಿದೆ.
ವಿಡಿಯೋದಲ್ಲಿ ಆಕೆ ತನ್ನ ಹಣೆಯ ಮೇಲಿರುವ ಚಿಹ್ನೆಯನ್ನ ನೋಡುವಂತೆ ಹೇಳುತ್ತಾರೆ. ಇದನ್ನ ನೀವು ಏಕಾಗ್ರತೆಯಿಂದ ನೋಡುತ್ತಲೇ ಹೋದರೆ ಬ್ಲಾಕ್ & ವೈಟ್ ದೃಶ್ಯದಲ್ಲೂ ನಿಮಗೆ ಬಣ್ಣಗಳು ಕಂಡಂತೆ ಭಾಸವಾಗಲಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು 4.14 ಲಕ್ಷ ವೀವ್ಸ್ ಸಂಪಾದಿಸಿದೆ. ಅಂದಹಾಗೆ ಈ ವಿಡಿಯೋ ನೋಡಿದ ಬಳಿಕ ನಿಮ್ಮ ಕಣ್ಣಿಗೆ ಯಾವ್ಯಾವ ಬಣ್ಣ ಕಂಡವು ಎಂಬುದನ್ನ ಹೇಳಬಲ್ಲೀರಾ..?
https://youtu.be/wj2L35wpspg