alex Certify ಸದಾ ಪ್ಲಾಸ್ಟಿಕ್​ ಬಾಟಲಿಯಲ್ಲಿಟ್ಟ ನೀರು ಕುಡಿಯುವ ಅಭ್ಯಾಸವಿದೆಯೇ….? ಈ ಸ್ಟೋರಿ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸದಾ ಪ್ಲಾಸ್ಟಿಕ್​ ಬಾಟಲಿಯಲ್ಲಿಟ್ಟ ನೀರು ಕುಡಿಯುವ ಅಭ್ಯಾಸವಿದೆಯೇ….? ಈ ಸ್ಟೋರಿ ಓದಿ

ಬಾಯಾರಿಕೆಯಿಂದ ಬಚಾವ್​ ಆಗೋಕೆ ಬಾಟಲಿಯಲ್ಲಿ ನೀರನ್ನ ಹಾಕಿ ಫ್ರೀಜ್​ ಮಾಡಲು ಇಡುತ್ತೇವೆ. ನಿಮಗೂ ಕೂಡ ಇಂತಹ ಅಭ್ಯಾಸ ಇದ್ದರೆ ಈ ಸ್ಟೋರಿಯನ್ನ ಓದಲೇಬೇಕು.

ಮಿನರಲ್​ ವಾಟರ್​ ಬಾಟಲಿಯನ್ನ ಒಂದೇ ಬಾರಿಗೆ ಬಳಕೆ ಮಾಡಬೇಕು. ಒಮ್ಮೆ ಬಳಕೆ ಮಾಡಿದ ಬಳಿಕ ಬಾಟಲಿಯನ್ನ ಎಸೆದುಬಿಡಬೇಕು. ಆದರೆ ಈ ಬಾಟಲಿಯನ್ನ ದೀರ್ಘಕಾಲದವರೆಗೆ ಬಳಕೆ ಮಾಡೋದ್ರಿಂದ ಆರೋಗ್ಯಕ್ಕೇ ಹಾನಿ ಉಂಟು ಮಾಡಬಹುದು.

ನೀವು ಬಾಟಲಿಯಲ್ಲಿ ನೀರನ್ನ ತುಂಬಿ ಫ್ರಿಜ್​ನಲ್ಲಿ ಇಟ್ಟರೆ ಇದರಲ್ಲಿ ಅರ್ಸೆನಿಕ್, ಫ್ಲೋರೈಡ್​ನಂತಹ ರಾಸಾಯನಿಕಗಳು ಉತ್ಪತ್ತಿ ಆಗಬಹುದು. ಇದರಿಂದ ನಿಮ್ಮ ದೇಹಕ್ಕೆ ಹಾನಿ ಉಂಟಾಗಲಿದೆ.

ಬಿಸಿ ಆದಷ್ಟು ಪ್ಲಾಸ್ಟಿಕ್​ ಕರಗಲು ಆರಂಭಿಸುತ್ತದೆ. ನೀವು ಬಿಸಿ ನೀರನ್ನ ಪ್ಲಾಸ್ಟಿಕ್​ ಬಾಟಲಿಯಲ್ಲಿ ಹಾಕಿಟ್ಟರೆ ಅದರ ಆಕಾರ ಬದಲಾಗುತ್ತದೆ ಅನ್ನೋದು ನಿಮಗೂ ತಿಳಿದಿದೆ. ಹೀಗಾಗಿ ಕಾರುಗಳಲ್ಲಿ ಪ್ಲಾಸ್ಟಿಕ್​ ಬಾಟಲಿಯಲ್ಲಿ ತುಂಬಿದ ನೀರನ್ನ ಇಟ್ಟರೆ ಕಾರಿನ ಇಂಜಿನ್​ ಬಿಸಿಯಾಗೋದ್ರಿಂದ ಬಾಟಲಿ ಕೂಡ ಬಿಸಿಯಾಗುತ್ತೆ. ಇದು ಬ್ರೆಸ್ಟ್​ ಕ್ಯಾನ್ಸರ್​ನಂತಹ ಮಾರಕ ಕಾಯಿಲೆಗೆ ಕಾರಣವಾಗಬಹುದು.

ಪ್ಲಾಸ್ಟಿಕ್​ ಬಾಟಲಿಯಲ್ಲಿ ಹಾಕಿಟ್ಟ ನೀರನ್ನ ತುಂಬಾ ಸಮಯಗಳ ಕಾಲ ಶೇಖರಿಸಿ ಇಡೋದ್ರಿಂದ ನಿಮ್ಮ ರೋಗನಿರೋಧಕ ಶಕ್ತಿಯ ಮೇಲೂ ಪರಿಣಾಮ ಉಂಟಾಗಬಹುದು. ಇದರಲ್ಲಿ ಉತ್ಪತ್ತಿಯಾಗುವ ರಾಸಾಯನಿಕ ನಿಮ್ಮ ದೇಹದ ಮೇಲೆ ಮಾರಣಾಂತಿಕ ಪರಿಣಾಮ ಬೀರಲಿದೆ. phthalatesನಂತಹ ಅಂಶ ಲಿವರ್​ ಕ್ಯಾನ್ಸರ್​ಗೆ ಕಾರಣವಾಗುತ್ತೆ

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...