alex Certify ಆಹಾರದ ಬಗ್ಗೆ ಮೊದಲ ಬಾರಿ ಮಾರ್ಗಸೂಚಿ ಬಿಡುಗಡೆ ಮಾಡಿದ ಡಬ್ಲ್ಯುಹೆಚ್ಒ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಹಾರದ ಬಗ್ಗೆ ಮೊದಲ ಬಾರಿ ಮಾರ್ಗಸೂಚಿ ಬಿಡುಗಡೆ ಮಾಡಿದ ಡಬ್ಲ್ಯುಹೆಚ್ಒ

ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆ ಹಲವಾರು ಮಾರ್ಗಸೂಚಿಗಳನ್ನು ಹೊರಡಿಸಿದೆ. ಸ್ವಚ್ಛತೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಹಲವಾರು ಮಾರ್ಗಸೂಚಿಗಳನ್ನು ನೀಡಲಾಗುತ್ತಿದೆ. ಆಹಾರ ಸುರಕ್ಷತೆಗೆ ಸಂಬಂಧಿಸಿದಂತೆ ಇನ್ನೂ ಕೆಲವು ಸಲಹೆಗಳನ್ನು ಡಬ್ಲ್ಯಎಚ್ಒ ನೀಡಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಅತೀ ಮುಖ್ಯವಾಗಿದೆ.

ಯಾವುದೇ ಆಹಾರ ಪದಾರ್ಥವನ್ನು ಬೇಯಿಸುವ ಅಥವಾ ಮುಟ್ಟುವ ಮೊದಲು ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಶೌಚಾಲಯದ ನಂತರ ಕೈಗಳನ್ನು ಚೆನ್ನಾಗಿ ತೊಳೆಯಿರಿ. ಅಡುಗೆಗೆ ಬಳಸುವ ಎಲ್ಲಾ ವಸ್ತುಗಳ ಮೇಲ್ಮೈಯನ್ನು ತೊಳೆಯಿರಿ ಮತ್ತು ಸ್ವಚ್ಛಗೊಳಿಸಿ. ಅಡಿಗೆ ಮನೆಯನ್ನು ಕೀಟಗಳು ಮತ್ತು ಪ್ರಾಣಿಗಳಿಂದ ದೂರವಿಡಿ.

ಕೊರೊನಾ ವೈರಸ್ ಗೆ ಸೂಕ್ಷ್ಮಜೀವಿಗಳು ಕಾರಣವಾಗುವುದಿಲ್ಲ. ಆದ್ರೆ ಅಡುಗೆ ಮನೆಯ ಕೊಳಕು, ತೊಳೆಯದ ಬಳಸುವ ತರಕಾರಿ, ಪಾತ್ರೆಗಳಲ್ಲಿ ಕಾಣಿಸುವ ಸೂಕ್ಷ್ಮಜೀವಿಗಳು ಬೇರೆ ರೋಗಕ್ಕೆ ಕಾರಣವಾಗುತ್ತದೆ.

ಕಚ್ಚಾ ಮಾಂಸ, ಸಮುದ್ರದ ಆಹಾರವನ್ನು ಇತರ ಆಹಾರಗಳಿಂದ ದೂರವಿಡಿ. ಕಚ್ಚಾ ಮಾಂಸವನ್ನು ಬೇಯಿಸಲು ಹಾಗೂ ಕತ್ತರಿಸಲು ಪ್ರತ್ಯೇಕ ಪಾತ್ರೆ, ಚಾಕು ಬಳಸಿ. ಕಚ್ಚಾ ಮತ್ತು ಬೇಯಿಸಿದ ಆಹಾರದ ನಡುವೆ ಅಂತರವನ್ನು ಕಾಯ್ದುಕೊಳ್ಳಿ. ಆಹಾರವನ್ನು ಚೆನ್ನಾಗಿ ಬೇಯಿಸಿ, ವಿಶೇಷವಾಗಿ ಮಾಂಸ, ಮೊಟ್ಟೆ, ಕೋಳಿ ಮತ್ತು ಸಮುದ್ರ ಆಹಾರಗಳನ್ನು ಬೇಯಿಸಿ ತಿನ್ನಿ.

ಬೇಯಿಸಿದ ಆಹಾರವನ್ನು ತಿನ್ನುವ ಮೊದಲು ಮತ್ತೊಮ್ಮೆ ಬಿಸಿ ಮಾಡಿ. 70 ° C ತಾಪಮಾನದಲ್ಲಿ ಬೇಯಿಸಿದ ಆಹಾರವನ್ನು ಸೇವಿಸಿ. ಬೇಯಿಸಿದ ಆಹಾರವನ್ನು ಕೋಣೆಯ ಉಷ್ಣಾಂಶದಲ್ಲಿ 2 ಗಂಟೆಗಳಿಗಿಂತ ಹೆಚ್ಚು ಕಾಲ ಬಿಡಬೇಡಿ. ಬೇಯಿಸಿದ ಆಹಾರವನ್ನು ಸೂಕ್ತ ತಾಪಮಾನದಲ್ಲಿ ರೆಫ್ರಿಜರೇಟರ್‌ನಲ್ಲಿ ಇರಿಸಿ. ನಂತ್ರ ಬಿಸಿ ಮಾಡಿ ಸೇವಿಸಿ.

ಕುಡಿಯಲು ಮತ್ತು ಅಡುಗೆ ಮಾಡಲು ಯಾವಾಗಲೂ ಶುದ್ಧ ನೀರನ್ನು ಬಳಸಿ. ಸಾಧ್ಯವಾದರೆ ಕುಡಿಯುವ ಮೊದಲು ನೀರನ್ನು ಕುದಿಸಿ. ತರಕಾರಿಗಳು ಮತ್ತು ಹಣ್ಣುಗಳನ್ನು ಚೆನ್ನಾಗಿ ತೊಳೆಯಿರಿ. ತಾಜಾ ಮತ್ತು ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳಿ. ಪಾಶ್ಚರೀಕರಿಸಿದ ಹಾಲು ಸುರಕ್ಷತೆಯ ದೃಷ್ಟಿಯಿಂದ ಉತ್ತಮವಾಗಿದೆ. ಅವಧಿ ಮೀರಿದ ಆಹಾರವನ್ನು ಬಳಸಬೇಡಿ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...