alex Certify
ಕನ್ನಡ ದುನಿಯಾ       Mobile App
       

Kannada Duniya

ಕನಸಿನಲ್ಲಿ ಕಾಣುವ ಸೆಕ್ಸ್ ಗಿದೆ ನಾನಾ ಅರ್ಥ

ಕನಸು ಬೀಳುವುದು ಸಾಮಾನ್ಯ ಸಂಗತಿ. ನಿದ್ರೆಯಲ್ಲಿ ಅನೇಕರು ಸಂಭೋಗದ ಬಗ್ಗೆ ಕನಸು ಕಾಣ್ತಾರೆ. ಸೆಕ್ಸ್ ಬಗ್ಗೆ ಕನಸು ಬಿದ್ರೆ ಚಿಂತೆಗೊಳಗಾಗುವವರೂ ಇದ್ದಾರೆ. ಕನಸಿಗೂ-ಸಂಭೋಗಕ್ಕೂ ಏನು ಅರ್ಥವಿದೆ ಎಂಬುದನ್ನು ತಿಳಿದುಕೊಳ್ಳುವ ಅಗತ್ಯವಿದೆ.

ರಾತ್ರಿ ಮಲಗುವ ಮೊದಲು ನಾವು ಅನೇಕ ವಿಷ್ಯಗಳ ಬಗ್ಗೆ ಆಲೋಚನೆ ಮಾಡಿರುತ್ತೇವೆ. ಕೆಲವೊಮ್ಮೆ ಅದೇ ಆಲೋಚನೆಗಳು ಕನಸಿನ ರೂಪದಲ್ಲಿ ಬರುತ್ತವೆ. ಕೆಲ ಕನಸುಗಳು ಸುಖಕರ ಅನುಭವ ನೀಡಿದ್ರೆ ಮತ್ತೆ ಕೆಲ ಕನಸುಗಳು ಭಯ ಹುಟ್ಟಿಸುತ್ತವೆ. ಸಂಭೋಗದ ಬಗ್ಗೆ ಕನಸು ಕಂಡ್ರೆ ಅದು ಸಂತೋಷದ ಅನುಭವ ನೀಡುತ್ತದೆ.

ನಿಮ್ಮ ಜೀವನದಲ್ಲಿ ಲೈಂಗಿಕ ಆನಂದ ಪಡೆಯಲು ಸಾಧ್ಯವಾಗದಿದ್ದಾಗ ಅಥವಾ ಲೈಂಗಿಕತೆಗೆ ಸಂಬಂಧಿಸಿದ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದಿದ್ದಾಗ ಇಂಥ ಕನಸುಗಳು ಬೀಳಲು ಶುರುವಾಗುತ್ತವೆ. ಅಪರಿಚಿತರೊಂದಿಗೆ, ಕಚೇರಿ ವ್ಯಕ್ತಿಯೊಂದಿಗೆ, ಸಾರ್ವಜನಿಕ ಸ್ಥಳದಲ್ಲಿ, ನಿಮ್ಮ ಮಾಜಿ ಗೆಳೆಯ ಅಥವಾ ಗೆಳತಿ ಮತ್ತು ಗಂಡ ಅಥವಾ ಹೆಂಡತಿಯೊಂದಿಗೆ ಸಂಭೋಗಿಸುತ್ತಿರುವಂತೆ ಕನಸು ಬೀಳುತ್ತದೆ.

ಈ ಕನಸುಗಳು ನಿಮ್ಮ ಕಾಮಾಸಕ್ತಿ ಬಗ್ಗೆ ಹೇಳುತ್ತವೆ. ನೀವು ದೈಹಿಕ ಅಗತ್ಯವನ್ನು ಪೂರೈಸುತ್ತಿಲ್ಲ ಎಂಬುದನ್ನು ಹೇಳುತ್ತವೆ. ಇಂಥ ಕನಸು ಬಿದ್ದಾಗ ನಿಮ್ಮ ಮನಸ್ಸನ್ನು ಶಾಂತವಾಗಿಡಲು ಪ್ರಯತ್ನಿಸಿ. ಹಾಗೆ ಸುರಕ್ಷಿತ ಮಾರ್ಗಗಳನ್ನು ಅನುಸರಿಸಿ.

 

Subscribe Newsletter

Get latest updates on your inbox...

Opinion Poll

  • ಕರೋನಾ ಸೋಂಕು ನಿಯಂತ್ರಣಕ್ಕೆ ಮೋದಿ ಸರ್ಕಾರ ಕೈಗೊಂಡಿರುವ ಕ್ರಮಗಳು ತೃಪ್ತಿದಾಯಕವಾಗಿದೆಯೇ...?

    View Results

    Loading ... Loading ...