alex Certify ‘ರಂಜಾನ್’ ಗೆ ತಯಾರಿಸಿ ಶಾಹಿ ಮಲ್ಪೋವಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ರಂಜಾನ್’ ಗೆ ತಯಾರಿಸಿ ಶಾಹಿ ಮಲ್ಪೋವಾ

Shahi malpua/ शाही मालपुआ recipe in hindi -Maa ki Rasoi Se

ರಂಜಾನ್ ಸಂದರ್ಭದಲ್ಲಿ ಮುಸ್ಲಿಮರು ವಿವಿಧ ಖಾದ್ಯಗಳ ತಯಾರಿಯಲ್ಲಿ ತೊಡಗಿರುತ್ತಾರೆ. ವೆಜ್, ನಾನ್ ವೆಜ್ ಆಹಾರ ಸಿದ್ಧಪಡಿಸಿ ನೆರೆಹೊರೆಯವರು, ಸಂಬಂಧಿಕರೊಂದಿಗೆ ಭೋಜನ ಮಾಡ್ತಾರೆ. ಆದರೆ ಈ ಬಾರಿ ಲಾಕ್‌ ಡೌನ್‌ ಕಾರಣಕ್ಕೆ ಇದು ಸಾಧ್ಯವಾಗುವುದಿಲ್ಲವಾದರೂ ಮನೆ ಮಂದಿಯೊಂದಿಗೆ ಸವಿಯಲು ಅಡ್ಡಿಯಿಲ್ಲ. ಈ ರಂಜಾನ್ ಗೆ ಅಂತಲೆ ಕೆಲವು ವಿಶೇಷ ತಿನಿಸುಗಳಿವೆ. ಅದ್ರಲ್ಲಿ ಶಾಹಿ ಮಲ್ಪೋವಾ ಕೂಡಾ ಒಂದು. ಇದು ಸಿಹಿಯಾಗಿ ರುಚಿಯಾಗಿಯೂ ಇರುತ್ತೆ.

ಶಾಹಿ ಮಲ್ಪೋವಾ ತಯಾರಿಸುವ ವಿಧಾನ :

ಮೈದಾ ಹಿಟ್ಟು – 1 ಕಪ್

ಮೊಟ್ಟೆ – 2

ಡ್ರೈ ಫ್ರೂಟ್ಸ್ ಪೌಡರ್ – 1 ಸ್ಪೂನ್

ಸಕ್ಕರೆ – 1 ಕಪ್

ಹಾಲು

ಏಲಕ್ಕಿ – 2

ಕೇಸರಿ ಬಣ್ಣ

ಕರಿಯಲು ಎಣ್ಣೆ

ಮಾಡುವ ವಿಧಾನ :

ಪಾತ್ರೆಯಲ್ಲಿ ಒಂದು ಕಪ್ ಮೈದಾಹಿಟ್ಟು ಹಾಕಿ, ಅದಕ್ಕೆ ಎರಡು ಮೊಟ್ಟೆ ಸೇರಿಸಬೇಕು. ನಂತರ ಗೋಡಂಬಿ, ಪಿಸ್ತಾ, ಬಾದಾಮಿ ಮಿಶ್ರಿತ ಪುಡಿಯನ್ನು ಒಂದು ಸ್ಪೂನ್ ಹಾಕಬೇಕು. ಈ ಮಿಶ್ರಣಕ್ಕೆ 1 ಕಪ್ ಸಕ್ಕರೆ, ಏಲಕ್ಕಿ ಪುಡಿ, ಫುಡ್ ಕಲರ್ ಹಾಕಿ ನಂತರ ಹಾಲಿನಲ್ಲಿ ಕಲೆಸಬೇಕು.

ದೋಸೆ ಹಿಟ್ಟಿನ ಹದಕ್ಕೆ ಕಲಸಿ 15 ನಿಮಿಷ ಇಡಬೇಕು. ನಂತರ ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಸೌಟಿನಲ್ಲಿ ಕಲಸಿಟ್ಟ ಮಿಶ್ರಣವನ್ನು ಬಿಡಬೇಕು. ಎರಡೂ ಬದಿ ಕೆಂಪಾದ, ನಂತರ ತೆಗೆಯಬೇಕು. ಆಗ ಬಿಸಿ ಬಿಸಿ ಶಾಹಿ ಮಲ್ಪೋವಾ ರೆಡಿ. ಬೇಕಿದ್ದರೆ ಇದರ ಮೇಲೆ ಡ್ರೈ ಫ್ರೂಟ್ಸ್ ಹಾಕಬಹುದು. ರಂಜಾನ್ ಸಮಯದಲ್ಲಿ ಮನೆಗೆ ಅತಿಥಿಗಳು ಬಂದಾಗ ಇದನ್ನು ಕೊಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...