alex Certify ಸುಲಭವಾಗಿ ಮಾಡಿ ‘ಅವಲಕ್ಕಿ’ ಇಡ್ಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸುಲಭವಾಗಿ ಮಾಡಿ ‘ಅವಲಕ್ಕಿ’ ಇಡ್ಲಿ

ತುಂಬಾ ಸುಲಭವಾಗಿ, ಬೇಗನೆ ಮಾಡಬಹುದಾದ ತಿನಿಸು ಇದು. ಬೆಳಗಿನ ತಿಂಡಿಗೆ ಅವಲಕ್ಕಿ ಇಡ್ಲಿ ತಯಾರಿಸಬಹುದು. ಕಾಯಿ ಚಟ್ನಿ ಇದಕ್ಕೆ ಒಳ್ಳೆ ಕಾಂಬಿನೇಷನ್.

ಬೇಕಾಗುವ ಸಾಮಗ್ರಿ : 1 ಕಪ್ ಅವಲಕ್ಕಿ, ಅರ್ಧ ಕಪ್ ಇಡ್ಲಿ ರವಾ, 2 ಕಪ್ ಹುಳಿ ಮೊಸರು, ಚಿಟಿಕೆ ಬೇಕಿಂಗ್ ಸೋಡಾ, ನೀರು, ರುಚಿಗೆ ತಕ್ಕಷ್ಟು ಉಪ್ಪು, ಇಡ್ಲಿ ತಟ್ಟೆಗೆ ಸವರಲು ಎಣ್ಣೆ.

ಮಾಡುವ ವಿಧಾನ : 1 ಕಪ್ ಅವಲಕ್ಕಿಯನ್ನು 10-15 ನಿಮಿಷ ನೀರಿನಲ್ಲಿ ನೆನೆಸಿ. ಅದು ಮೆತ್ತಗಾದ ಮೇಲೆ ಚಮಚದಿಂದ ಸ್ಮಾಶ್ ಮಾಡಿ. ನಂತರ 1.5 ಕಪ್ ಇಡ್ಲಿ ರವೆಯನ್ನು ಬೆರೆಸಿ. ಮೊಸರನ್ನೂ ಹಾಕಿ. ಅಗತ್ಯಕ್ಕೆ ತಕ್ಕಷ್ಟು ನೀರು ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. 10-15 ನಿಮಿಷ ಹಾಗೇ ಬಿಡಿ.

ಅಗತ್ಯವಿದ್ದರೆ ಮತ್ತೆ ನೀರು ಹಾಕಿ. ಕೊನೆಯಲ್ಲಿ ಅಗತ್ಯಕ್ಕೆ ತಕ್ಕಷ್ಟು ಉಪ್ಪು ಹಾಗೂ ಚಿಟಿಕೆ ಬೇಕಿಂಗ್ ಸೋಡಾ ಬೆರೆಸಿ. ಇಡ್ಲಿ ತಟ್ಟೆಗೆ ಸ್ವಲ್ಪ ಎಣ್ಣೆ ಸವರಿ, ರೆಡಿ ಮಾಡಿದ ಹಿಟ್ಟನ್ನು ಹಾಕಿ ಮಧ್ಯಮ ಉರಿಯಲ್ಲಿ 8-10 ನಿಮಿಷ  ಬೇಯಿಸಿ. ಗ್ಯಾಸ್ ಆಫ್ ಮಾಡಿ 5 ನಿಮಿಷ ಹಾಗೇ ಬಿಡಿ. ಬಿಸಿ ಬಿಸಿ ಅವಲಕ್ಕಿ ಇಡ್ಲಿ ಸವಿಯಲು ಸಿದ್ಧ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...