alex Certify ಚಳಿಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು ಈ ‘ಮಿಲ್ಕ್ ಮಸಾಲ ಪೌಡರ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಳಿಗಾಲದಲ್ಲಿ ಮಕ್ಕಳ ಆರೋಗ್ಯಕ್ಕೆ ಒಳ್ಳೆಯದು ಈ ‘ಮಿಲ್ಕ್ ಮಸಾಲ ಪೌಡರ್’

ಮಕ್ಕಳಿಗೆ ಹಾರ್ಲಿಕ್ಸ್, ಬೂಸ್ಟ್ ಕೊಡುವ ಬದಲು ಮನೆಯಲ್ಲಿ ಒಮ್ಮೆ ಈ ಮಿಲ್ಕ್ ಮಸಾಲ ಪೌಡರ್ ಮಾಡಿ ಕೊಡಿ. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಜತೆಗೆ ಮಳೆಗಾಲ, ಚಳಿಗಾಲಕ್ಕೂ ಇದು ಹೇಳಿ ಮಾಡಿಸಿದ್ದು. ದೊಡ್ಡವರು ಕೂಡ ಇದನ್ನು ಕುಡಿಯಬಹುದು.

ಬೇಕಾಗುವ ಸಾಮಗ್ರಿಗಳು:

50 ಗ್ರಾಂ – ಬಾದಾಮಿ, 50 ಗ್ರಾಂ – ಗೋಡಂಬಿ, 20 ಗ್ರಾಂ – ಪಿಸ್ತಾ, 15 ಗ್ರಾಂ – ಏಲಕ್ಕಿ, 1 ಟೀ ಸ್ಪೂನ್ – ಸೋಂಪು, ½ ಟೀ ಸ್ಪೂನ್ – ಕೇಸರಿ ದಳ., 1 ಟೀ ಸ್ಪೂನ್ – ಒಣಶುಂಠಿ ಪುಡಿ, 1 ½ ಟೀ ಸ್ಪೂನ್ – ಜಾಯಿಕಾಯಿ ತುರಿ.

ಮಾಡುವ ವಿಧಾನ:

ಮೊದಲಿಗೆ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಬಾದಾಮಿ, ಗೋಡಂಬಿ, ಪಿಸ್ತಾ ಹಾಕಿ 4 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಹುರಿದುಕೊಂಡು ಒಂದು ಪ್ಲೇಟ್ ಗೆ ತೆಗೆದುಕೊಳ್ಳಿ. ನಂತರ ಅದೇ ಪ್ಯಾನ್ ಗೆ ಏಲಕ್ಕಿ, ಸೋಂಪು, ಕೇಸರಿ ದಳ ಕೂಡ ಸೇರಿಸಿ 3 ನಿಮಿಷಗಳ ಕಾಲ ಹುರಿದುಕೊಂಡು ಪ್ಲೇಟ್ ಗೆ ತೆಗೆದುಕೊಳ್ಳಿ.

ಇದು ತಣ್ಣಗಾದ ಮೇಲೆ ಇದನ್ನು ಒಂದು ಮಿಕ್ಸಿ ಜಾರಿಗೆ ಹಾಕಿ ಇದಕ್ಕೆ ಒಣ ಶುಂಠಿ ಪುಡಿ, ಜಾಯಿಕಾಯಿ ಪುಡಿ ಸೇರಿಸಿ ಪುಡಿ ಮಾಡಿಕೊಳ್ಳಿ. ಈ ಮಿಶ್ರಣ ತಣ್ಣಗಾದ ಮೇಲೆ ಗಾಳಿಯಾಡದ ಡಬ್ಬಕ್ಕೆ ಹಾಕಿ ಸ್ಟೋರ್ ಮಾಡಿಕೊಳ್ಳಿ. 1 ಗ್ಲಾಸ್ ಬಿಸಿ ಹಾಲಿಗೆ 1 ಟೀ ಸ್ಪೂನ್ ಈ ಪೌಡರ್ ಅನ್ನು ಸೇರಿಸಿಕೊಂಡು ಕುದಿಸಿ. ಇದಕ್ಕೆ 1 ಟೀ ಸ್ಪೂನ್ ಸಕ್ಕರೆ ಸೇರಿಸಿ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಲಾಭವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...