alex Certify ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಚಾಕೋಲೆಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ಮನೆಯಲ್ಲೇ ಮಾಡಿಕೊಡಿ ಚಾಕೋಲೆಟ್

ಚಾಕೋಲೆಟ್ ಎಂದರೆ ಮಕ್ಕಳಿಗೆ ತುಂಬಾ ಇಷ್ಟ. ಪ್ರತಿ ಬಾರಿ ಹೊರಗಡೆಯಿಂದ ಕೊಂಡು ತರುವ ಬದಲು ಮನೆಯಲ್ಲೇ ಸುಲಭವಾಗಿ ರುಚಿಕರವಾದ ಚಾಕೋಲೆಟ್ ಮಾಡಿಕೊಂಡು ಸವಿಯಿರಿ.

ಒಂದು ಬೌಲ್ ಗೆ 1 ಕಪ್ ಸಕ್ಕರೆ ಪುಡಿ, ¾ ಕಪ್ ಕೋಕೊ ಪುಡಿ, ¼ ಕಪ್ ಹಾಲಿನ ಪುಡಿ ಹಾಕಿ. ಒಂದು ಬಾಣಲೆಗೆ ನೀರು ಹಾಕಿ ಗ್ಯಾಸ್ ಮೇಲೆ ಇಡಿ. ಅದು ಕುದಿಯಲು ಶುರು ಮಾಡಿದಾಗ ಅದರ ಮೇಲೆ ಒಂದು ಗ್ಲಾಸ್ ಬೌಲ್ ಇಡಿ. ಅದಕ್ಕೆ ¾ ಕಪ್ ತೆಂಗಿನೆಣ್ಣೆ ಹಾಕಿಕೊಳ್ಳಿ.

ಅದು ಬಿಸಿಯಾಗುತ್ತಲೆ ಚಾಕೋಲೆಟ್ ಮಿಶ್ರಣವನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅದು ತುಸು ದಪ್ಪಗಾಗುತ್ತಲೆ ಕೆಳಗೆ ಇಳಿಸಿಕೊಂಡು ಚಾಕೋಲೆಟ್ ಮೌಲ್ಡ್ ಗೆ ಇದನ್ನು ಹಾಕಿಕೊಂಡು ಫ್ರಿಡ್ಜ್ ನಲ್ಲಿ 3 ಗಂಟೆಗಳ ಕಾಲ ಇಡಿ. ಇದು ಚೆನ್ನಾಗಿ ಸೆಟ್ ಆದ ಮೇಲೆ ತೆಗೆದು ಸವಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...