alex Certify ಬಿಸಿ ಬಿಸಿ ಅನ್ನದ ಜತೆಗೆ ಸವಿಯಿರಿ ರುಚಿ ರುಚಿ ಅವರೆಕಾಯಿ ಸಾಂಬಾರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಸಿ ಬಿಸಿ ಅನ್ನದ ಜತೆಗೆ ಸವಿಯಿರಿ ರುಚಿ ರುಚಿ ಅವರೆಕಾಯಿ ಸಾಂಬಾರು

ಬಿಸಿ ಅನ್ನದ ಜತೆ ರುಚಿಕರವಾದ ಅವರೆಕಾಯಿ ಸಾಂಬಾರು ಇದ್ದರೆ ಊಟ ಹೊಟ್ಟೆಗೆ ಇಳಿದಿದ್ದೇ ಗೊತ್ತಾಗುವುದಿಲ್ಲ. ಇಲ್ಲಿ ಸುಲಭವಾಗಿ ಮಾಡುವ ಅವರೆಕಾಯಿ ಸಾಂಬಾರಿನ ವಿಧಾನವಿದೆ ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು:

1ಕಪ್ ತೊಗರಿಬೇಳೆಯನ್ನು ಚೆನ್ನಾಗಿ ತೊಳೆದು ಒಂದು ಕುಕ್ಕರ್ ಗೆ ಹಾಕಿ ಬೇಳೆ ಬೇಯುವಷ್ಟು ನೀರು, ಚಿಟಿಕೆ ಅರಿಶಿನ ½ ಟೀ ಸ್ಪೂನ್ ಎಣ್ಣೆ ಹಾಕಿ 1 ವಿಷಲ್ ಕೂಗಿಸಿಕೊಳ್ಳಿ. ¼ ಕೆಜಿಯಾಗುವಷ್ಟು ಅವರೆಕಾಯಿಯನ್ನು ಚೆನ್ನಾಗಿ ತೊಳೆದು ಕತ್ತರಿಸಿಕೊಂಡು ಇಟ್ಟುಕೊಳ್ಳಿ. ಹಾಗೇ ¼ ಕಪ್ ನಷ್ಟು ಹುಣಸೆಹಣ್ಣಿನ ರಸ, ಸಾಂಬಾರು ಪುಡಿ 1 ಚಮಚ, ಖಾರದ ಪುಡಿ – 1 ಟೀ ಸ್ಪೂನ್ , 1 ಈರುಳ್ಳಿ (ಕತ್ತರಿಸಿಕೊಂಡಿದ್ದು), ಟೊಮೆಟೊ – 1 (ಕತ್ತರಿಸಿಕೊಂಡಿದ್ದು) 10 – ಎಸಳು-ಕರಿಬೇವು, 2 ಚಮಚ – ಎಣ್ಣೆ, 1 ಟೀ ಸ್ಪೂನ್ – ಸಾಸಿವೆ, 1  -ಟೀ ಸ್ಪೂನ್ – ಜೀರಿಗೆ, ಕೊತ್ತಂಬರಿಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ ತಕ್ಕಷ್ಟು, ಬೆಳ್ಳುಳ್ಳಿ – 5 ಎಸಳು.

ಮಾಡುವ ವಿಧಾನ:

ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಅದು ಬಿಸಿಯಾಗುತ್ತಲೇ ಸಾಸಿವೆ, ಜೀರಿಗೆ, ಹಾಕಿ ಅದು ಸಿಡಿಯುತ್ತಲೆ ಬೆಳ್ಳುಳ್ಳಿ, ಕರಿಬೇವು, ಈರುಳ್ಳಿ, ಟೊಮೆಟೊ ಹಾಕಿ ಚೆನ್ನಾಗಿ ಪ್ರೈ ಮಾಡಿಕೊಳ್ಳಿ. ನಂತರ ಕತ್ತರಿಸಿಕೊಂಡ ಅವರೆಕಾಯಿ ಹಾಕಿ, ಸ್ವಲ್ಪ ಉಪ್ಪು ಹಾಕಿ 2 ನಿಮಿಷಗಳ ಕಾಲ ಫ್ರೈ ಮಾಡಿ. ನಂತರ ಇದಕ್ಕೆ 2 ಕಪ್ ನೀರು, ಸಾಂಬಾರು ಪುಡಿ, ಖಾರದಪುಡಿ ಹಾಕಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ.

ನಂತರ ಬೇಯಿಸಿಕೊಂಡ ಬೇಳೆ ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಸ್ವಲ್ಪ ಹೊತ್ತು ಕುದಿಸಿಕೊಂಡು ಕೊತ್ತಂಬರಿಸೊಪ್ಪು ಸೇರಿಸಿದರೆ ರುಚಿಕರವಾದ ಸಾಂಬಾರು ಸವಿಯಲು ಸಿದ್ಧ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...