alex Certify ಬಾಯಲ್ಲಿ ನೀರೂರಿಸುವ ʼಕ್ಯಾರೆಟ್ ಹಲ್ವಾʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಯಲ್ಲಿ ನೀರೂರಿಸುವ ʼಕ್ಯಾರೆಟ್ ಹಲ್ವಾʼ

ಕ್ಯಾರೆಟ್ ಹಲ್ವಾ ಎಂದರೆ ಎಲ್ಲರ ಬಾಯಲ್ಲೂ ನೀರು ಬರುತ್ತದೆ. ಸಿಹಿ ತಿನ್ನಬೇಕು ಅನಿಸಿದಾಗ ಮನೆಯಲ್ಲಿಯೇ ಸುಲಭವಾಗಿ ಇದನ್ನು ಮಾಡಿಕೊಂಡು ಮನೆಮಂದಿಯೆಲ್ಲಾ ಸವಿಯಬಹುದು. ಮಾಡುವ ವಿಧಾನ ಕೂಡ ಸುಲಭವಿದೆ.

ಬೇಕಾಗುವ ಸಾಮಾಗ್ರಿ:

ಕ್ಯಾರೆಟ್ ತುರಿ-3 ಕಪ್, ತುಪ್ಪ-1/4 ಕಪ್, ಗೋಡಂಬಿ-1 ಟೇಬಲ್ ಸ್ಪೂನ್, ದ್ರಾಕ್ಷಿ-15, ಬಾದಾಮಿ-1 ಟೇಬಲ್ ಸ್ಪೂನ್, ಪಿಸ್ತಾ-1 ಟೇಬಲ್ ಸ್ಪೂನ್, ಸಕ್ಕರೆ-1 ಕಪ್, ಹಾಲು-3 ಕಪ್.

ಮಾಡುವ ವಿಧಾನ:

ಮೊದಲಿಗೆ ಒಂದು ಬಾಣಲೆಗೆ ತಪ್ಪ ಹಾಕಿಕೊಂಡು ಅದಕ್ಕೆ ದ್ರಾಕ್ಷಿ, ಗೋಡಂಬಿ ಹಾಕಿ ಹುರಿದುಕೊಳ್ಳಿ. ನಂತರ ಅದೇ ಪಾತ್ರೆಗೆ ಕ್ಯಾರೆಟ್ ತುರಿ ಹಾಕಿ 3 ನಿಮಿಷಗಳ ಕಾಲ ಹುರಿಯಿರಿ. ನಂತರ ಇದಕ್ಕೆ ಹಾಲು ಸೇರಿಸಿ ಚೆನ್ನಾಗಿ ಕ್ಯಾರೆಟ್ ತುರಿಯನ್ನು ಬೇಯಿಸಿಕೊಳ್ಳಿ.

ಹಾಲು ಇಂಗುವವರೆಗೆ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಸಕ್ಕರೆ ಕರಗುವವರೆಗೆ ಕೈಯಾಡಿಸಿ ನಂತರ ಇದಕ್ಕೆ ಸ್ವಲ್ಪ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸಕ್ಕರೆ ಪಾಕ ಇಂಗುವವರಗೆ ಕೈಯಾಡಿಸಿ. ಈ ಮಿಶ್ರಣ ತಳ ಬಿಡುವವರೆಗೆ ಕೈಯಾಡಿಸಿ. ನಂತರ ಚಿಟಿಕೆ ಏಲಕ್ಕಿ ಪುಡಿ , ಡ್ರೈಫ್ರೂಟ್ಸ್ ಸೇರಿಸಿ ಸರ್ವ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...