alex Certify ಥಟ್ಟಂತ ಮಾಡಿ ರುಚಿಕರ ನಿಂಬೆ ಹಣ್ಣಿನ ರಸಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ಮಾಡಿ ರುಚಿಕರ ನಿಂಬೆ ಹಣ್ಣಿನ ರಸಂ

ಅಡುಗೆ ಬೇಗ ಆದಷ್ಟು ಹೆಂಗಸರಿಗೆ ನಿರಾಳ. ಥಟ್ಟಂತ ರೆಡಿಯಾಗುವ ನಿಂಬೆ ಹಣ್ಣಿನ ರಸಂ ಮಾಡುವ ವಿಧಾನ ಇಲ್ಲಿದೆ. ಬೇಗ ಆಗುವುದರ ಜತೆಗೆ ಇದು ರುಚಿಕರವಾಗಿ ಕೂಡ ಇದೆ.

ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 3 ಕಪ್ ನೀರು ಹಾಕಿ ಚೆನ್ನಾಗಿ ಕುದಿಯಲು ಬಿಡಿ. ನಂತರ ಇದಕ್ಕೆ 2 ಹಸಿಮೆಣಸು ಸೀಳಿಕೊಂಡು ಹಾಕಿ. ¼ ಟೀ ಸ್ಪೂನ್ ಅರಿಶಿನ, 1 ಟೀ ಸ್ಪೂನ್ ಬೆಲ್ಲ, ½ ಟೀ ಸ್ಪೂನ್ ರಸಂ ಪುಡಿ ಹಾಕಿ ಕುದಿಸಿ. ನಂತರ ಉಪ್ಪು ಹಾಕಿ. ಆಮೇಲೆ 4 ಟೇಬಲ್ ಸ್ಪೂನ್ ಲಿಂಬೆಹಣ್ಣಿನ ರಸ ಸೇರಿಸಿ ಕುದಿಸಿ ಗ್ಯಾಸ್ ಆಫ್ ಮಾಡಿ.

ನಂತರ ಒಂದು ಒಗ್ಗರಣೆ ಪಾತ್ರೆಗೆ 1 ಟೀ ಸ್ಪೂನ್ ತುಪ್ಪ ಹಾಕಿ ಅದು ಬಿಸಿಯಾಗುತ್ತಲೇ ಸ್ವಲ್ಪ ಜೀರಿಗೆ 5 ಎಸಳು ಕರಿಬೇವು, ಚಿಟಿಕೆ ಇಂಗು ಹಾಕಿ. ನಂತರ ಈ ಒಗ್ಗರಣೆಯನ್ನು ಮಾಡಿಟ್ಟುಕೊಂಡ ರಸಂಗೆ ಹಾಕಿ ಮುಚ್ಚಿಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...