alex Certify ಥಟ್ಟಂತ ಆಗಿಬಿಡುತ್ತೆ ಈ ʼಬಟಾಣಿʼ ಕುರ್ಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ಆಗಿಬಿಡುತ್ತೆ ಈ ʼಬಟಾಣಿʼ ಕುರ್ಮ

ಚಪಾತಿ, ದೋಸೆ, ಪರೋಟ ಮಾಡಿದಾಗ ಏನಾದರೂ ಕುರ್ಮ ಇದ್ದರೆ ಚೆನ್ನಾಗಿರುತ್ತದೆ. ಆದರೆ ಸಮಯವಿಲ್ಲ ಎನ್ನುವವರು ಸುಲಭವಾಗಿ ಆಗುವಂತಹ ಈ ಕುರ್ಮ ಮಾಡಿನೋಡಿ.

ಬೇಕಾಗುವ ಸಾಮಗ್ರಿಗಳು:

ಆಲೂಗಡ್ಡೆ – 2, ಬಟಾಣಿ – 1 ಕಪ್, ಖಾರದ ಪುಡಿ – 1 ಟೀ ಸ್ಪೂನ್, ಧನಿಯಾ ಪುಡಿ – 2 ಟೀ ಸ್ಪೂನ್, ಅರಿಶಿನ ಪುಡಿ – 1/4 ಟೀ ಸ್ಪೂನ್, ಗರಂ ಮಸಾಲ – 1/2 ಟೀ ಸ್ಪೂನ್, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – 2 ಟೇಬಲ್ ಸ್ಪೂನ್, ತೆಂಗಿನಕಾಯಿ ತುರಿ – 1/2 ಕಪ್, ಸೋಂಪು – 1 ಟೀ ಸ್ಪೂನ್, ಗಸಗಸೆ – 1 ಟೀ ಸ್ಪೂನ್, ಗೋಡಂಬಿ – 5, 2 – ಟೊಮೆಟೊ, 1 ಟೀ ಸ್ಪೂನ್ – ಶುಂಠಿ, ಬೆಳ್ಳುಳ್ಳಿ ಪೇಸ್ಟ್.

ಮಾಡುವ ವಿಧಾನ:

ಆಲೂಗಡ್ಡೆಯನ್ನು ತೊಳೆದು ಕತ್ತರಿಸಿಕೊಳ್ಳಿ. ಬಟಾಣಿ ಕಾಳುಗಳನ್ನು ನೀರಿನಲ್ಲಿ ತೊಳೆದು ರಾತ್ರಿಯೇ ನೆನೆಸಿಟ್ಟುಕೊಳ್ಳಿ ನಂತರ ಕುಕ್ಕರ್ ಗೆ ಹಾಕಿ 1 ವಿಷಲ್ ಕೂಗಿಸಿಕೊಳ್ಳಿ. ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಸೋಂಪು, ಗಸಗಸೆ, ಗೋಡಂಬಿ ಹಾಕಿ ತುಸು ನೀರು ಬೆರೆಸಿ ರುಬ್ಬಿಕೊಳ್ಳಿ. ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಅದಕ್ಕೆ 1 ಟೀ ಸ್ಪೂನ್ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ.

ನಂತರ 1 ಟೊಮೆಟೊ ಕತ್ತರಿಸಿ ಹಾಕಿ. ಅದು ಮೆತ್ತಗಾಗುತ್ತಿದ್ದಂತೆ ಆಲೂಗಡ್ಡೆ, ಬೇಯಿಸಿಕೊಂಡ ಬಟಾಣಿ ಕಾಳು ಸೇರಿಸಿ ಮಿಕ್ಸ್ ಮಾಡಿ ಅದಕ್ಕೆ ಖಾರದ ಪುಡಿ, ಧನಿಯಾ ಪುಡಿ, ಅರಿಶಿನ, ಗರಂ ಮಸಾಲ ಹಾಕಿ ನಂತರ ರುಬ್ಬಿಕೊಂಡ ಮಿಶ್ರಣ ಸೇರಿಸಿ 2 ನಿಮಿಷಗಳ ಕಾಲ ಫ್ರೈ ಮಾಡಿ 2 ಕಪ್ ನೀರು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ 7 ನಿಮಿಷಗಳ ಕಾಲ ಕುದಿಸಿ. ನಂತರ ಕೊತ್ತಂಬರಿಸೊಪ್ಪಿನಿಂದ ಅಲಂಕರಿಸಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...