alex Certify ಥಟ್ಟಂತ ಆಗಿಬಿಡುತ್ತೆ ಈ ʼಫಿಶ್ ಫ್ರೈʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಥಟ್ಟಂತ ಆಗಿಬಿಡುತ್ತೆ ಈ ʼಫಿಶ್ ಫ್ರೈʼ

ಫಿಶ್ ಎಂದರೆ ಬಾಯಲ್ಲಿ ನೀರು ಬರುತ್ತದೆಯಾ…? ಅದರಲ್ಲೂ ಊಟದ ಜತೆ ಫಿಶ್ ಫ್ರೈ ಇದ್ದರೆ ಕೇಳಬೇಕಾ…? ಇಲ್ಲಿ ರುಚಿಕರವಾದ ಫಿಶ್ ಫ್ರೈ ಮಾಡುವ ವಿಧಾನ ಇದೆ ಟ್ರೈ ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು:

½ ಕೆ.ಜಿ. ಮೀನು (ಫ್ರೈ ಮಾಡುವ ರೀತಿಗೆ ಕತ್ತರಿಸಿಕೊಳ್ಳಿ), 2 ಟೇಬಲ್ ಸ್ಪೂನ್ – ಎಣ್ಣೆ, 1 ಟೇಬಲ್ ಸ್ಪೂನ್ – ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅಗತ್ಯವಿರುವಷ್ಟು ಲಿಂಬೆಹಣ್ಣಿನ ರಸ, ಉಪ್ಪು – ರುಚಿಗೆ ತಕ್ಕಷ್ಟು, ¼ ಟೀ ಸ್ಪೂನ್ – ಅರಿಶಿನ, ¾ ಟೀ ಸ್ಪೂನ್ – ಗರಂ ಮಸಾಲ, 1/2 ಟೀ ಸ್ಪೂನ್ – ಧನಿಯಾ ಪುಡಿ, ½ ಟೀ ಸ್ಪೂನ್ – ಖಾರದ ಪುಡಿ.

ಮಾಡುವ ವಿಧಾನ:

ಒಂದು ಬೌಲ್ ಗೆ ಅರಿಶಿನ, ಗರಂ ಮಸಾಲ, ಧನಿಯಾ ಪುಡಿ, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಶುಂಠಿ – ಬೆಳ್ಳುಳ್ಳಿ ಪೇಸ್ಟ್, ಲಿಂಬೆಹಣ್ಣಿನ ರಸ ಇವಿಷ್ಟನ್ನು ಹಾಕಿ ಮಿಕ್ಸ್ ಮಾಡಿ. ನಂತರ 1 ಟೇಬಲ್ ಸ್ಪೂನ್ ನೀರು ಸೇರಿಸಿ ಪೇಸ್ಟ್ ರೀತಿ ಮಾಡಿಕೊಳ್ಳಿ.

ಇದಕ್ಕೆ ಮೀನು ಸೇರಿಸಿ ಚೆನ್ನಾಗಿ ಈ ಮಿಶ್ರಣವನ್ನು ಹಚ್ಚಿ. 20 ನಿಮಿಷಗಳ ಕಾಲ ಇದನ್ನು ಹಾಗೆಯೇ ಬಿಡಿ. ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದಕ್ಕೆ ಎಣ್ಣೆ ಹಾಕಿ ನಂತರ ಮೀನಿನ ಹೋಳುಗಳನ್ನು ಇಟ್ಟು ಎರಡೂ ಕಡೆ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...