alex Certify ಹೀಗೆ ಮಾಡಿ ನೋಡಿ ‘ಮಶ್ರೂಮ್ʼ ಪೆಪ್ಪರ್ ಡ್ರೈ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗೆ ಮಾಡಿ ನೋಡಿ ‘ಮಶ್ರೂಮ್ʼ ಪೆಪ್ಪರ್ ಡ್ರೈ

ಅನ್ನದ ಜತೆ, ಚಪಾತಿ ಜತೆ ಏನಾದರೂ ಸೈಡ್ ಡಿಶ್  ಇದ್ದರೆ ಚೆನ್ನಾಗಿರುತ್ತದೆ. ಇಲ್ಲಿ ರುಚಿಕರವಾದ ಮಶ್ರೂಮ್ ಪೆಪ್ಪರ್ ಡ್ರೈ ಮಾಡುವ ವಿಧಾನ ಇದೆ. ಇದು ರುಚಿಕರ ಹಾಗೂ ಥಟ್ಟಂತ ಆಗಿ ಬಿಡುತ್ತದೆ.

ಮಶ್ರೂಮ್ 1 ಪ್ಯಾಕ್ ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ನಂತರ ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ 3 ಟೀ ಸ್ಪೂನ್ ಕಾಳುಮೆಣಸು, 1 ಟೀ ಸ್ಪೂನ್ ಜೀರಿಗೆ, 1 ಟೇಬಲ್ ಸ್ಪೂನ್ ಸೋಂಪು, 5 ಲವಂಗ, 1 ತುಂಡು ಚಕ್ಕೆ ಹಾಕಿ ಎಣ್ಣೆ ಸೇರಿಸದೆ ಫ್ರೈ ಮಾಡಿ. ನಂತರ ಇದು ಪರಿಮಳ ಬರುತ್ತಿದ್ದಂತೆ ಗ್ಯಾಸ್ ಆಫ್ ಮಾಡಿ. ತಣ್ಣಗಾದ ಮೇಲೆ ಪುಡಿ ಮಾಡಿಕೊಳ್ಳಿ.

ಗ್ಯಾಸ್ ಮೇಲೆ ಬಾಣಲೆ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಸೇರಿಸಿ ಅದು ಬಿಸಿಯಾಗುತ್ತಲೇ ಸಾಸಿವೆ 1 ಟೀ ಸ್ಪೂನ್ ಹಾಕಿ ನಂತರ 2 ಈರುಳ್ಳಿ ಕತ್ತರಿಸಿಹಾಕಿ. ಈರುಳ್ಳಿ ಕೆಂಪಾಗುತ್ತಿದ್ದಂತೆ 1 ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಸೇರಿಸಿ 1 ನಿಮಿಷಗಳ ಕಾಲ ಫ್ರೈ ಮಾಡಿ ನಂತರ ಮಶ್ರೂಮ್ ಅನ್ನು ಕತ್ತರಿಸಿಕೊಂಡು ಹಾಕಿ ಮಿಕ್ಸ್ ಮಾಡಿ. ಮಶ್ರೂಮ್ ನೀರು ಬಿಡುತ್ತಿದ್ದಂತೆ ಅದಕ್ಕೆ ಮಾಡಿಟ್ಟುಕೊಂಡ ಪುಡಿ ಸೇರಿಸಿ ಮಿಕ್ಸ್ ಮಾಡಿ ಉಪ್ಪು ಹಾಕಿ 5 ನಿಮಿಷಗಳ ಕಾಲ ಮುಚ್ಚಿ. ನಂತರ ಇದಕ್ಕೆ ಸ್ವಲ್ಪ ಕರಿಬೇವು, ಕೊತ್ತಂಬರಿ ಸೊಪ್ಪು ಸೇರಿಸಿ ಮಿಕ್ಸ್ ಮಾಡಿ ಬೇಯಿಸಿಕೊಳ್ಳಿ. ಮಶ್ರೂಮ್ ಅನ್ನು ಚೆನ್ನಾಗಿ ಬೇಯಿಸಿಕೊಂಡು ಗ್ಯಾಸ್ ಆಫ್ ಮಾಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...