alex Certify ಇಡ್ಲಿ-ದೋಸೆಗೆ ಸಾಥ್ ನೀಡುವ ʼಶೇಂಗಾ ಚಟ್ನಿʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಡ್ಲಿ-ದೋಸೆಗೆ ಸಾಥ್ ನೀಡುವ ʼಶೇಂಗಾ ಚಟ್ನಿʼ

ತೆಂಗಿನಕಾಯಿ, ಟೊಮೆಟೊ ಚಟ್ನಿ ಮಾಡುತ್ತಿರುತ್ತೇವೆ. ಒಮ್ಮೆ ಈ ರೀತಿಯಾಗಿ ಶೇಂಗಾ ಚಟ್ನಿ ಮಾಡಿಕೊಂಡು ತಿನ್ನಿರಿ. ಇದು ಇಡ್ಲಿ-ದೋಸೆಗೆ ಹೇಳಿ ಮಾಡಿಸಿದ್ದು.

ಮೊದಲಿಗೆ ಗ್ಯಾಸ್ ಮೇಲೆ ಒಂದು ತವಾ ಇಟ್ಟು ಅದಕ್ಕೆ 1 ½ ಕಪ್ ಶೇಂಗಾ ಬೀಜ ಹಾಕಿ ಅದು ಕೆಂಪಗಾಗುವವರೆಗೆ ಹುರಿದುಕೊಳ್ಳಿ. ನಂತರ ಇದನ್ನು ಒಂದು ಪ್ಲೇಟ್ ಗೆ ಹಾಕಿಕೊಂಡು ತಣ್ಣಗಾಗಲು ಬಿಡಿ.

ಪದವೀಧರರಿಗೆ ಭರ್ಜರಿ ಶುಭ ಸುದ್ದಿ: 1 ಲಕ್ಷಕ್ಕೂ ಹೆಚ್ಚು ಹೊಸಬರ ನೇಮಕಾತಿಗೆ ಮುಂದಾದ ಐಟಿ ಕಂಪನಿಗಳು; ಇಲ್ಲಿದೆ ಮಾಹಿತಿ

ಶೇಂಗಾದ ಮೇಲೆ ಇರುವ ಸಿಪ್ಪೆ ತೆಗೆಯಿರಿ. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ 1 ಟೀ ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಅದಕ್ಕೆ 3 ಬೆಳ್ಳುಳ್ಳಿ ಎಸಳು ಸೇರಿಸಿ ಹಾಗೆ 1 ಈರುಳ್ಳಿ, 2 ಒಣಮೆಣಸು ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ಈರುಳ್ಳಿ ಸ್ವಲ್ಪ ಮೆತ್ತಗಾದರೆ ಸಾಕು ಕೆಂಪಗಾಗುವ ಅಗತ್ಯವಿಲ್ಲ.

ನಂತರ ಅರ್ಧ ಲಿಂಬೆಹಣ್ಣಿನ ಗಾತ್ರದಷ್ಟು ಹುಣಸೆಹಣ್ಣು, ಸಣ್ಣತುಂಡು ಬೆಲ್ಲ ಸೇರಿಸಿ ಹುರಿದುಕೊಳ್ಳಿ. ಈ ಮಿಶ್ರಣವನ್ನು ಮಿಕ್ಸಿ ಜಾರಿಗೆ ಹಾಕಿ ½ ಕಪ್ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಂಡು ಬೌಲ್ ಗೆ ತೆಗೆದಿಟ್ಟುಕೊಳ್ಳಿ. ಇದಕ್ಕೆ ಸಾಸಿವೆ, ಕರಿಬೇವು, ಒಣಮೆಣಸಿನ ಒಗ್ಗರಣೆ ಕೊಟ್ಟು ಇಡ್ಲಿ ಅಥವಾ ದೋಸೆಯೊಂದಿಗೆ ಸವಿಯಿರಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...