alex Certify ಮಹಿಳೆಯ ‘ಸಂತಾನೋತ್ಪತ್ತಿ’ ಮೇಲೆ ಪ್ರಭಾವ ಬೀರುತ್ತೆ ನಿದ್ರೆ ಸಮಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯ ‘ಸಂತಾನೋತ್ಪತ್ತಿ’ ಮೇಲೆ ಪ್ರಭಾವ ಬೀರುತ್ತೆ ನಿದ್ರೆ ಸಮಯ

ಬೇಗ ಮಲಗಿ, ಬೇಗ ಏಳು ಎಂದು ತಾಯಿ ಮಕ್ಕಳಿಗೆ ಸಲಹೆ ನೀಡ್ತಾಳೆ. ಈ ಪಾಲಿಸಿ ಬುದ್ಧಿವಾದ ಹೇಳುವ ತಾಯಿಯೂ ಅನುಸರಿಸಬೇಕು. ಮುಖ್ಯವಾಗಿ ಮಕ್ಕಳನ್ನು ಬಯಸುವ ಮಹಿಳೆಯರು ಬೇಗ ಮಲಗಿ, ಬೇಗ ಏಳಬೇಕು. ಮಲಗುವ ಸಮಯ ಅವ್ರ ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುತ್ತದೆ.

ಬೇಗ ಮಲಗಿ, ಬೇಗ ಏಳುವ ಮಹಿಳೆ, ತಡವಾಗಿ ಏಳುವ ಮಹಿಳೆಗಿಂತ ಹೆಚ್ಚು ಆರೋಗ್ಯವಾಗಿರುತ್ತಾಳೆ. ರಾತ್ರಿ ಬೇಗ ಮಲಗಿದ್ರೆ ದೇಹವು ಶಕ್ತಿಯಿಂದ ತುಂಬಿರುತ್ತದೆ ಮತ್ತು ತಾಜಾತನದ ಅನುಭವವಾಗುತ್ತದೆ. ಬೇಗ ಮಲಗುವ ಮಹಿಳೆಗೆ ನಿದ್ರಾ ಹೀನತೆ ಸಮಸ್ಯೆ ಕಾಡುವುದಿಲ್ಲ. ತೂಕ ಇಳಿಯುವ ಜೊತೆಗೆ ಮಧುಮೇಹ ಮತ್ತು ಹೃದ್ರೋಗದ ಅಪಾಯ ಕಡಿಮೆಯಿರುತ್ತದೆ. ಈ ಎಲ್ಲಾ ಸಮಸ್ಯೆಗಳು ಗರ್ಭಧಾರಣೆಯ ಸಾಧ್ಯತೆಯ ಮೇಲೆ ಪರಿಣಾಮ ಬೀರುತ್ತವೆ.

ಗರ್ಭಿಣಿಯಾಗುವುದು ನಿಜಕ್ಕೂ ಕಠಿಣ ಪ್ರಕ್ರಿಯೆ. ಇದರಲ್ಲಿ ಹಲವು ಹಂತಗಳಿವೆ. ಇಡೀ ಕೆಲಸವನ್ನು ಗಂಡು ವೀರ್ಯ ಮತ್ತು ಹೆಣ್ಣು ಮೊಟ್ಟೆ ಮಾಡಬೇಕು. ಗರ್ಭಿಣಿಯಾಗುವ ಸಾಧ್ಯತೆಯನ್ನು ಹೆಚ್ಚಿಸಲು ಇತರ ಅಂಶಗಳು ನೆರವಾಗಬೇಕು.

ಮಹಿಳೆ ಆರೋಗ್ಯವಾಗಿದ್ದರೆ, ಅವಳು ನಿಯಮಿತವಾಗಿ ಅಂಡೋತ್ಪತ್ತಿ ಮಾಡುತ್ತಾಳೆ. ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಸಮತೋಲಿತ ಆಹಾರವು ಇದಕ್ಕೆ ಸಹಾಯ ಮಾಡುತ್ತದೆ. ಸಾಕಷ್ಟು ಪ್ರಮಾಣದ ಪ್ರೋಟೀನ್, ಖನಿಜ ಮತ್ತು ಸೂಕ್ಷ್ಮ ಪೋಷಕಾಂಶಗಳನ್ನು ಪಡೆಯಲು ನೆರವಾಗುತ್ತದೆ. ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳಂತಹ ಆಹಾರಗಳನ್ನು ಸೇವಿಸಬೇಕು. ವಿಟಮಿನ್ ಸಿ ಮತ್ತು ಇ, ಫೋಲೇಟ್, ಬೀಟಾ-ಕ್ಯಾರೋಟಿನ್ ಮತ್ತು ಲುಟೀನ್ ನಂತಹ ಆಂಟಿ ಆಕ್ಸಿಡೆಂಟ್ ಗುಣ ಹೊಂದಿರುತ್ತದೆ. ವೀರ್ಯ ಮತ್ತು ಮೊಟ್ಟೆಯ ಕೋಶಗಳನ್ನು ಹಾನಿಗೊಳಿಸುವ ಕಣಗಳ ವಿರುದ್ಧ ಆಂಟಿ ಆಕ್ಸಿಡೆಂಟ್ ಹೋರಾಡುತ್ತದೆ.

ನಿಯಮಿತವಾಗಿ ವ್ಯಾಯಾಮ ಮಾಡಬೇಕು. ವಾಕಿಂಗ್, ಯೋಗ ಅಥವಾ ಮನೆಯ ಕೆಲಸ, ತೋಟಗಾರಿಕೆ  ಕೆಲಸ ಮಹಿಳೆಯರಲ್ಲಿ ಫಲವತ್ತತೆಯನ್ನು ಹೆಚ್ಚಿಸುತ್ತದೆ. ಹೆಚ್ಚು ದಣಿವಾಗುವ ವ್ಯಾಯಾಮ ಮಾಡಬಾರದು. ಹೆಚ್ಚು ವ್ಯಾಯಾಮ, ದೇಹದ ಶಕ್ತಿಯ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಿಣಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಅತಿಯಾದ ಒತ್ತಡವು ಹಾರ್ಮೋನುಗಳ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಗರ್ಭಧಾರಣೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಗರ್ಭಿಣಿಯಾಗಲು ಪ್ರಯತ್ನಿಸುತ್ತಿದ್ದರೆ ಒತ್ತಡದ ಮಟ್ಟವನ್ನು ಕಡಿಮೆ ಮಾಡಬೇಕು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...