alex Certify ಎದೆ ಹಾಲು ವೃದ್ದಿಯಾಗಲು ಇಲ್ಲಿವೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ಹಾಲು ವೃದ್ದಿಯಾಗಲು ಇಲ್ಲಿವೆ ಟಿಪ್ಸ್

ತಾಯಿಯ ಎದೆ ಹಾಲು ಚಿಕ್ಕಮಗುವಿಗೆ ತುಂಬಾ ಅಗತ್ಯ. ಆರು ತಿಂಗಳವರಗೆ ಮಗುವಿಗೆ ಎದೆಹಾಲು ಅತ್ಯಗತ್ಯವಾದ ಆಹಾರವಾಗಿದೆ. ಇದು ಮಗುವಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಕೆಲವರಿಗೆ ಎದೆಹಾಲು ಇರುವುದಿಲ್ಲ ಹಾಗೇ ಇನ್ನು ಕೆಲವರಿಗೆ ಕಡಿಮೆ ಇರುತ್ತದೆ. ಅಂತಹವರು ಈ ಆಹಾರ ಸೇವಿಸುವುದರ ಮೂಲಕ ಎದೆ ಹಾಲನ್ನು ಹೆಚ್ಚಿಸಿಕೊಳ್ಳಬಹುದು.

2 ಚಮಚದಷ್ಟು ಸೋಂಪನ್ನು 2 ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ ಅದಕ್ಕೆ ಸ್ವಲ್ಪ ಕಲ್ಲು ಸಕ್ಕರೆ ಸೇರಿಸಿ ಕುಡಿಯಿರಿ. ಇದನ್ನು ದಿನಕ್ಕೆ ಮೂರು ಹೊತ್ತು ಊಟವಾದ ನಂತರ ಕುಡಿಯಿರಿ.

2 ಚಮಚದಷ್ಟು ಮೆಂತೆ ಕಾಳುಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿ ನೆನೆಸಿಡಿ. ಬೆಳಿಗ್ಗೆ ಎದ್ದಾಗ ಈ ನೀರನ್ನು ಸೇವಿಸಿ ಜತೆಗೆ ಆ ಮೆಂತೆಕಾಳನ್ನು ಜಗಿದು ತಿನ್ನಿರಿ. ಇದರಿಂದ ಹಾಲು ಹೆಚ್ಚಾಗುತ್ತದೆ.

1 ಚಮಚದಷ್ಟು ಜೀರಿಗೆ ಪುಡಿಯೊಂದಿಗೆ 1 ಚಮಚದಷ್ಟು ತುಪ್ಪ ಸೇರಿಸಕೊಂಡು ತಿನ್ನುವುದರಿಂದ ಎದೆಹಾಲು ಹೆಚ್ಚಾಗುತ್ತದೆ.

1 ಟೀ ಸ್ಪೂನ್ ಒಣ ಶುಂಠಿ ಪುಡಿಗೆ 1 ಟೇಬಲ್ ಸ್ಪೂನ್ ನಷ್ಟು ಬೆಲ್ಲ ಸೇರಿಸಿಕೊಂಡು ದಿನಕ್ಕೆ ಎರಡು ಸಲ ತಿನ್ನಿರಿ. ಇದರಿಂದ ಎದೆಹಾಲು ಹೆಚ್ಚಾಗುತ್ತದೆ.

ಸಬ್ಬಸಿಗೆ ಸೊಪ್ಪನ್ನು ಆಹಾರದಲ್ಲಿ ಹೆಚ್ಚಾಗಿ ಬಳಸುವುದರಿಂದ ಎದೆಹಾಲು ವೃದ್ದಿಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...