alex Certify ಈ ‘ಮನೆ ಮದ್ದು’ ಉಪಯೋಗಿಸಿ ಭೇದಿ ಸಮಸ್ಯೆ ನಿವಾರಿಸಿಕೊಳ್ಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ‘ಮನೆ ಮದ್ದು’ ಉಪಯೋಗಿಸಿ ಭೇದಿ ಸಮಸ್ಯೆ ನಿವಾರಿಸಿಕೊಳ್ಳಿ

ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ಇರುವುದು, ಅಥವಾ ಕೆಲವೊಮ್ಮೆ ಹೊರಗಡೆ ಆಹಾರ ತಿನ್ನುವುದರಿಂದ ಅಜೀರ್ಣವಾಗಿ ಭೇದಿ ಶುರುವಾಗುತ್ತದೆ. ಇದರಿಂದ ಹೊಟ್ಟೆನೋವು ಕೂಡ ಕಾಣಿಸಿಕೊಳ್ಳುತ್ತದೆ. ಮಾತ್ರೆಗಳನ್ನು ತಿನ್ನುವ ಬದಲು ಮನೆಯಲ್ಲಿಯೇ ಇರುವ ಔಷಧಿಗಳನ್ನು ಉಪಯೋಗಿಸುವುದರಿಂದ ಇದನ್ನು ಕಡಿಮೆ ಮಾಡಿಕೊಳ್ಳಬಹುದು.

1 ಕಪ್ ಮೊಸರಿಗೆ 1 ಬಾಳೆಹಣ್ಣನ್ನು ಚಿಕ್ಕಚಿಕ್ಕದ್ದಾಗಿ ಕತ್ತರಿಸಿಕೊಂಡು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ತಿನ್ನುವುದರಿಂದ ಭೇದಿ ಕಡಿಮೆಯಾಗುತ್ತದೆ.

ಇನ್ನು ಒಂದು ಗ್ಲಾಸ್ ಮಜ್ಜಿಗೆಗೆ 1 ಟೀ ಸ್ಪೂನ್ ನಷ್ಟು ಮೆಂತೆ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಭೇದಿ ನಿಯಂತ್ರಣಕ್ಕೆ ಬರುತ್ತದೆ.

ಒಂದು ಕಪ್ ಮೊಸರಿಗೆ ಮೆಂತೆ ಪುಡಿ 2 ಟೀ ಸ್ಪೂನ್, ಜೀರಿಗೆ ಪುಡಿ-2 ಟೀ ಸ್ಪೂನ್ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ತಿನ್ನಿ ಇದರಿಂದ ಭೇದಿ ಕಡಿಮೆಯಾಗುತ್ತದೆ.

½ ಟೀ ಸ್ಪೂನ್ ಸಾಸಿವೆ ಪುಡಿ, ½ ಟೀ ಸ್ಪೂನ್ ಜೀರಿಗೆ ಪುಡಿಗೆ 1 ಟೀ ಸ್ಪೂನ್ ಜೇನುತುಪ್ಪ ಸೇರಿಸಿ ತಿನ್ನಿ ಇದು ಕೂಡ ಭೇದಿಯನ್ನು ಶಮನ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...