alex Certify ಆನ್‌ ಲೈನ್‌ ನಲ್ಲಿ ಆರ್ಡರ್ ಮಾಡಿದ ವಸ್ತು ಪಡೆಯುವ ಮೊದಲು ಇರಲಿ ಈ ಎಚ್ಚರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆನ್‌ ಲೈನ್‌ ನಲ್ಲಿ ಆರ್ಡರ್ ಮಾಡಿದ ವಸ್ತು ಪಡೆಯುವ ಮೊದಲು ಇರಲಿ ಈ ಎಚ್ಚರಿಕೆ

ಕೊರೊನಾ ವೈರಸ್ ಹಿನ್ನಲೆಯಲ್ಲಿ ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಆದ್ರೆ ಲಾಕ್ ಡೌನ್ ನಾಲ್ಕರಲ್ಲಿ ಸಾಕಷ್ಟು ಸಡಿಲಿಕೆ ನೀಡಲಾಗಿದೆ. ಆನ್ಲೈನ್ ಸೇವೆ ಶುರುವಾಗಿದೆ.

ಜನರು ಆನ್ಲೈನ್ ನಲ್ಲಿ ಅಗತ್ಯ ವಸ್ತು ಸೇರಿದಂತೆ ಎಲ್ಲ ವಸ್ತುಗಳನ್ನು ಆರ್ಡರ್ ಮಾಡಬಹುದಾಗಿದೆ. ನೀವೂ ಆನ್ಲೈನ್ ನಲ್ಲಿ ವಸ್ತು ಖರೀದಿ ಮಾಡಿದ್ದರೆ ಅದನ್ನು ಪಡೆಯುವಾಗ ಕೆಲವೊಂದು ಎಚ್ಚರಿಕೆ ತೆಗೆದುಕೊಳ್ಳಿ.

ಆನ್ಲೈನ್ ಹಣ ಪಾವತಿಯನ್ನು ಆಯ್ಕೆ ಮಾಡಿಕೊಳ್ಳಿ. ಹಾಗೆ ಆನ್ಲೈನ್ ನಲ್ಲಿ ಬುಕ್ ಮಾಡಿದ ವಸ್ತು ಮನೆಗೆ ಬಂದಾಗ ಅದನ್ನು ಕೈನಲ್ಲಿ ಪಡೆಯುವುದು ಒಳ್ಳೆಯದಲ್ಲ. ಅದನ್ನು ಮನೆ ಬಾಗಿಲಿನ ಬಳಿ ಇಟ್ಟು ಹೋಗಲು ಹೇಳಿ. ಕೆಲ ಸಮಯದ ನಂತ್ರ ಅದನ್ನು ತೆಗೆದುಕೊಳ್ಳಿ.

ಮನೆಗೆ ಬಂದ ವಸ್ತುವನ್ನು ಸ್ಯಾನಿಟೈಜರ್ ಮಾಡಿ. ಹಾಗೆ ವಸ್ತುವನ್ನು ಮುಟ್ಟಿದ ನಂತ್ರ ಮುಖ, ಮೂಗು, ಕಣ್ಣನ್ನು ಮುಟ್ಟಿಕೊಳ್ಳಬೇಡಿ. ತಕ್ಷಣ ಕೈಗಳನ್ನು ತೊಳೆದುಕೊಳ್ಳಿ.

ಪ್ಯಾಕ್ ಮಾಡಿದ ವಸ್ತುವಿನಲ್ಲಿ ವೈರಸ್ ತುಂಬಾ ಸಮಯ ಇರಬಲ್ಲದು. ಹಾಗಾಗಿ ಪ್ಯಾಕ್ ಮಾಡಿದ ವಸ್ತುವನ್ನು ತಕ್ಷಣ ಹೊರಗೆ ಎಸೆಯಿರಿ. ಅದನ್ನು ಮುಟ್ಟಿದ ತಕ್ಷಣ ಕೈ ತೊಳೆದುಕೊಳ್ಳಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...