alex Certify ಬೇಸಿಗೆಯಲ್ಲಿ ‘ಸೌಂದರ್ಯ’ ಕಾಪಾಡಿಕೊಳ್ಳುವುದು ಹೇಗೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆಯಲ್ಲಿ ‘ಸೌಂದರ್ಯ’ ಕಾಪಾಡಿಕೊಳ್ಳುವುದು ಹೇಗೆ…?

ಬೇಸಿಗೆ ಕಾಲದಲ್ಲಿ ಆರೋಗ್ಯ ಹಾಳಾಗುವುದರ ಜೊತೆಗೆ ಅಂದವನ್ನು ಕೂಡ ಕೆಡಿಸುತ್ತದೆ. ಆದ್ದರಿಂದ ಬೇಸಿಗೆ ಕಾಲದಲ್ಲಿ ಆರೋಗ್ಯದ ಜೊತೆಗೆ ನಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬೇಕು. ಬೇಸಿಗೆ ಕಾಲದಲ್ಲಿ ಚರ್ಮದ ಸಮಸ್ಯೆ ಹೆಚ್ಚಾಗಿ ಕಂಡುಬರುವುದರಿಂದ ಆ ಬಗ್ಗೆ ಕೆಲವು ಮುನ್ನಚ್ಚರಿಕೆಯನ್ನು ತೆಗೆದುಕೊಳ್ಳಬೇಕು.

* ಬೇಸಿಗೆಯಲ್ಲಿ ದಿನಕ್ಕೆ ಎರಡು ಮೂರು ಬಾರಿ ಕಡಲೆ ಹಿಟ್ಟಿನಿಂದ ಮುಖ ತೊಳೆದರೆ ಮೊಡವೆಗಳಿಂದ ದೂರವಿರಬಹುದು.

* ಚರ್ಮ ಒಣಗಿ ಸುಕ್ಕು ಕಟ್ಟುವುದನ್ನು ತಡೆಗಟ್ಟಲು ಪ್ರತಿದಿನ ಎರಡು ಬಾರಿ ಒಂದು ಬಟ್ಟಲು ಮೊಸರಿಗೆ ಅರ್ಧ ಚಮಚ ಸಕ್ಕರೆ, ಅರ್ಧ ಚಮಚ ಉಪ್ಪು ಸೇರಿಸಿ ಕುಡಿಯಬೇಕು.

* ಕಾಫಿ – ಟೀಗಳಿಗಿಂತ ಜ್ಯೂಸನ್ನು ಸೇವಿಸಿದರೆ ದೇಹವನ್ನು ತಂಪಾಗಿಡಬಹುದು.

* ಸಾಧ್ಯವಾದಷ್ಟು ಕಾಟನ್ ಉಡುಪನ್ನೇ ಧರಿಸಿ. ಇದರಿಂದ ದೇಹದ ಉಷ್ಣವನ್ನು ತಡೆಯಬಹುದು.

* ಕೂದಲನ್ನು ಬಿಚ್ಚಿ ಬಿಡುವುದರಿಂದ ಬೆವರುವುದು ಜಾಸ್ತಿಯಾಗುತ್ತದೆ. ಕೂದಲನ್ನು ಪೋನಿಟೈಲ್ ಅಥವಾ ಜಡೆ ಹೆಣೆಯಿರಿ.

* ಸಂಜೆಯ ತಿಂಡಿಗೆ ಕರಿದ ಪದಾರ್ಥಗಳಿಗಿಂತ ಫ್ರೂಟ್ ಸಾಲಡ್, ವೆಜಿಟೇಬಲ್ ಸಾಲಡ್ ಗಳನ್ನು ತಿನ್ನುವುದು ಒಳ್ಳೆಯದು.

* ಬೇಸಿಗೆಯಲ್ಲಿ ತಣ‍್ಣೀರಿನ ಸ್ನಾನ ಹಿತಕರವೆನಿಸಿದರೂ ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಮಾಡುವುದು ಒಳ್ಳೆಯದು.

* ಹಾಗೇ ಬಿಸಿಲಿನಲ್ಲಿ ಹೋಗಲೇ ಬೇಕಾದರೆ ಕ್ಯಾಪ್, ಸ್ಕಾರ್ಫ್ ಧರಿಸಿ ಇಲ್ಲವೇ ಕೊಡೆಯನ್ನು ಬಳಸುವುದು ಉತ್ತಮ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...