alex Certify ಹೊಳೆಯುವ ಹಲ್ಲಿಗೆ ಇಲ್ಲಿದೆ ʼಮನೆ ಮದ್ದುʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಳೆಯುವ ಹಲ್ಲಿಗೆ ಇಲ್ಲಿದೆ ʼಮನೆ ಮದ್ದುʼ

ಸುಂದರವಾಗಿ ನಕ್ಕಾಗ ಹಲ್ಲುಗಳ ಬಣ್ಣ ಎಲ್ಲರನ್ನು ಸೆಳೆಯುತ್ತದೆ. ಸಾಮಾನ್ಯವಾಗಿ ಬಿಳಿ ಬಣ್ಣದ ಹಲ್ಲುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಆದ್ರೆ ಹಳದಿ ಹಲ್ಲುಗಳನ್ನು ಹೊಂದಿರುವವರಿಗೆ ಮುಕ್ತವಾಗಿ ನಗಲು ಮುಜುಗರ. ಹಳದಿ ಹಲ್ಲಿರುವವರು ಸರಳ ಉಪಾಯದ ಮೂಲಕ ಹಲ್ಲಿನ ಹೊಳಪು ಹೆಚ್ಚಿಸಿಕೊಳ್ಳಬಹುದು.

ಎರಡು ಚಮಚ ತೆಂಗಿನ ಎಣ್ಣೆಯನ್ನು ಹತ್ತು ನಿಮಿಷಗಳ ಕಾಲ ಬಾಯಿಯಲ್ಲಿ ಹಾಕಿ. ಬಾಯಿಯನ್ನು ಚೆನ್ನಾಗಿ ಸ್ವಚ್ಚಗೊಳಿಸಿ. ಹಲ್ಲುಗಳ ಮೇಲೆ ಸಂಗ್ರಹವಾಗಿರುವ ಕೊಳೆಯಿಂದ ಉಂಟಾಗುವ ಹಳದಿ ಬಣ್ಣವನ್ನು ತೆಗೆದು ಹಾಕಲು ಇದು ಸಹಾಯ ಮಾಡುತ್ತದೆ.

ಹಲ್ಲುಗಳ ಹಳದಿ ಬಣ್ಣವನ್ನು ತೆಗೆದು ಹಾಕಲು ಎರಡು ಟೀ ಚಮಚ ಆಪಲ್ ಸೈಡರ್ ವಿನೆಗರ್ ರನ್ನು ಮೂರು ಕಪ್ ನೀರಿನಲ್ಲಿ ಬೆರೆಸಿ. ಮೂವತ್ತು ಸೆಕೆಂಡುಗಳ ಕಾಲ ಹಲ್ಲುಗಳನ್ನು ಇದ್ರಿಂದ ತೊಳೆಯಿರಿ. ಸತತ ಮೂರು ವಾರಗಳವರೆಗೆ ಇದನ್ನು ಮಾಡುವುದ್ರಿಂದ ಹಲ್ಲು ಬಿಳಿಯಾಗುತ್ತದೆ.

ಎರಡು ಚಮಚ ಹೈಡ್ರೋಜನ್ ಪೆರಾಕ್ಸೈಡ್‌ಗೆ ಒಂದು ಚಮಚ ಅಡಿಗೆ ಸೋಡಾವನ್ನು ಬೆರೆಸಿ ಪೇಸ್ಟ್ ಮಾಡಿ. ಈ ಪೇಸ್ಟ್ ಬಳಸಿ ಬ್ರಷ್ ಮಾಡಿ. ನಾಲ್ಕರಿಂದ ಆರು ವಾರಗಳವರೆಗೆ ಇದನ್ನು ನಿರಂತರವಾಗಿ ಮಾಡುವುದರಿಂದ ಹಲ್ಲುಗಳು ಉತ್ತಮಗೊಳ್ಳುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...