alex Certify ‘ಡಾರ್ಕ್ ಸರ್ಕಲ್’ ಸಮಸ್ಯೆಗೂ ಇದೆ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಡಾರ್ಕ್ ಸರ್ಕಲ್’ ಸಮಸ್ಯೆಗೂ ಇದೆ ಪರಿಹಾರ

ವಯಸ್ಸಾದಂತೆ ಸಹಜವಾಗಿ ಕಾಣಿಸಿಕೊಳ್ಳುವ ಡಾರ್ಕ್ ಸರ್ಕಲ್ ಸಮಸ್ಯೆ ಕೆಲವೊಮ್ಮೆ ಸಣ್ಣ ವಯಸ್ಸಿನವರಲ್ಲೂ ಕಾಣಿಸಿಕೊಂಡು ತೀವ್ರ ಮುಜುಗರಕ್ಕೆ ಈಡು ಮಾಡಿ ಬಿಡುತ್ತದೆ. ಇದರ ನಿವಾರಣೆಗೆ ನಿಮ್ಮ ಜೀವನ ಕ್ರಮದಲ್ಲಿ ಈ ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು.

ವೈಯಕ್ತಿಕ ಕಾರಣಗಳಿರಲಿ, ಕಚೇರಿ ಕೆಲಸಗಳಿರಲಿ ಹೆಚ್ಚು ಒತ್ತಡಕ್ಕೆ ಗುರಿಯಾಗದಿರಿ. ಚಿಂತೆ ಹೆಚ್ಚಿದಷ್ಟೂ ನಿಮ್ಮ ಮುಖದ ಸೌಂದರ್ಯ ಹಾಳಾಗುತ್ತದೆ. ನೆರಿಗೆಗಳು ಮೂಡುತ್ತವೆ. ಹಾಗಾಗಿ ದಿನಕ್ಕೆ ಕನಿಷ್ಠ ಆರು ಗಂಟೆ ನಿದ್ದೆ ಮಾಡಿ, ರಕ್ತ ಪರಿಚಲನೆ ಕಡಿಮೆಯಾಗಿಯೂ ಕಪ್ಪು ವರ್ತುಲಗಳು ಕಾಣಿಸಿಕೊಂಡಿರಬಹುದು.

ಯಾವುದೇ ಕಾರಣಕ್ಕೂ ಮೇಕಪ್ ಇರುವಂತೆಯೇ ಮಲಗದಿರಿ. ಹಾಗಾಗಿ ನಿತ್ಯ ಮಲಗುವ ಮುನ್ನ ತಣ್ಣಗಿನ ನೀರಿನಲ್ಲಿ ಮತ್ತೆ ಮತ್ತೆ ಮುಖ ತೊಳೆಯಿರಿ. ಕಣ್ಣಿಗೆ ಹೆಚ್ಚು ಮೇಕಪ್ ಮಾಡುವುದನ್ನು ಅಂದರೆ ಹೆಚ್ಚಿನ ರಾಸಾಯನಿಕ ವಸ್ತುಗಳನ್ನು ಬಳಸುವುದನ್ನು ಕಡಿಮೆ ಮಾಡಿ.

ಹಣ್ಣು ತರಕಾರಿಗಳನ್ನು ಹೆಚ್ಚು ಸೇವಿಸಿ. ಕಬ್ಬಿಣಾಂಶ ಹೆಚ್ಚಿರುವ ಸೊಪ್ಪಿಗೂ ಆದ್ಯತೆ ನೀಡಿ. ಜಂಕ್ ಫುಡ್ ಗಳಿಂದ ದೂರವಿರಿ. ಚೆನ್ನಾಗಿ ನೀರು ಕುಡಿಯಿರಿ. ಈ ಮೂಲಕವೂ ನಿಮ್ಮ ತ್ವಚೆ ಹೊಳೆಯುವಂತೆ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...