alex Certify ಕೆನ್ನೆ ಮೇಲೆ ರಂಧ್ರಗಳಿವೆಯೇ…? ಹಾಗಾದ್ರೆ ಇಲ್ಲಿದೆ ʼಪರಿಹಾರʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆನ್ನೆ ಮೇಲೆ ರಂಧ್ರಗಳಿವೆಯೇ…? ಹಾಗಾದ್ರೆ ಇಲ್ಲಿದೆ ʼಪರಿಹಾರʼ

ಕೆಲವೇ ದಿನಗಳಲ್ಲಿ ಮುಖದ ಮೇಲಿನ ರಂಧ್ರಗಳನ್ನು ಹೋಗಲಾಡಿಸಲು ಇಲ್ಲಿದೆ ಒಂದಿಷ್ಟು ಟಿಪ್ಸ್.

ಅರ್ಧ ಸೌತೆಕಾಯಿ ಕತ್ತರಿಸಿ ರುಬ್ಬಿ ಪೇಸ್ಟ್ ತಯಾರಿಸಿ. ಅದಕ್ಕೆ ಒಂದು ಚಮಚ ನಿಂಬೆರಸ ಅಥವಾ ಟೊಮೆಟೊ ರಸವನ್ನು ಹಾಕಿ. ಒಂದು ಚಮಚ ಜೇನುತುಪ್ಪ, ಅರ್ಧ ಚಮಚ ಅಲೋವೆರಾ ಹಾಕಿ ಮಿಶ್ರಣ ಮಾಡಿಕೊಳ್ಳಿ.

ಮೊದಲು ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ನಂತರ ಹಚ್ಚಿದರೆ ಮುಖದ ಮೇಲಿರುವ ಮೊಡವೆ ಕಲೆಗಳು ದೂರವಾಗುತ್ತದೆ. ಹಾಗೆಯೇ ಮುಖದ ಮೇಲಿನ ರಂಧ್ರಗಳು ದೂರವಾಗುತ್ತವೆ.

ಅಲೋವೇರಾದಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಹೆಚ್ಚಾಗಿ ಇರುವುದರಿಂದ ಮೊಡವೆಗಳನ್ನು ಹೋಗಲಾಡಿಸಿ ರಂಧ್ರಗಳನ್ನು ಮುಚ್ಚುತ್ತದೆ. ಅದರೊಂದಿಗೆ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

ಮುಖಕ್ಕೆ ಹಚ್ಚಿ ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ. ಬಳಿಕ ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿ. ಹೀಗೆ ದಿನಕ್ಕೆರಡು ಬಾರಿ ಮಾಡಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...