alex Certify ಕುದುರೆ ಏರಿ ಡೆಲಿವರಿಗೆ ಬಂದ ಅಮೆಜಾನ್ ಬಾಯ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುದುರೆ ಏರಿ ಡೆಲಿವರಿಗೆ ಬಂದ ಅಮೆಜಾನ್ ಬಾಯ್

Watch: Man Arrives on Horseback to Deliver Parcel as Snow Chokes Roads in Kashmir

ಹಿಮಾಚ್ಛಾದಿತ ಕಾಶ್ಮೀರದ ರಸ್ತೆಗಳಲ್ಲಿ ವಾಹನಗಳು, ಮನುಷ್ಯರು ಸಂಚರಿಸುವುದೇ ಕಷ್ಟವಾಗಿದೆ. ಹೀಗಾಗಿ ಕುದುರೆ ಸವಾರಿ ಮೂಲಕ ಅಮೇಜಾನ್ ವಸ್ತುಗಳ ವಿತರಣೆ ನಡೆದಿದೆ.

ಆಧುನಿಕ ಕಾಶ್ಮೀರದಲ್ಲಿ ಮಧ್ಯಕಾಲೀನ ಯುಗ ಆರಂಭವಾದಂತೆ ಭಾಸವಾಗುವ ಈ ದೃಶ್ಯವೀಗ ಟ್ವಿಟ್ಟರ್ ನಲ್ಲಿ ವೈರಲ್ ಆಗಿದ್ದು, ಅಮೇಜಾನ್ ಸಂಸ್ಥೆಯ ಡೆಲಿವರಿ ಬಾಯ್ ಒಬ್ಬ ಕುದುರೆ ಏರಿ ಬಂದು ವಸ್ತುಗಳನ್ನು ಹಂಚುತ್ತಿದ್ದಾನೆ.

ಮಾಸ್ಕ್ ಧರಿಸಿ ಕೊರೋನಾ ಶಿಷ್ಟಾಚಾರ ಪಾಲಿಸುವ ಈತ ಮನೆಯೊಂದರ ಮುಂದೆ ಕುದುರೆ ನಿಲ್ಲಿಸಿ, ಕೆಳಗಿಳಿದು ಬರುತ್ತಾನೆ. ಆರ್ಡರ್ ಕೊಟ್ಟವರನ್ನ ಹೊರಗೆ ಕರೆಯಿಸಿಕೊಂಡು ದೂರದಿಂದಲೇ ಪಾರ್ಸಲ್ ಇಟ್ಟು, ಡಿಜಿಟಲ್ ಪೇಮೆಂಟ್ ನಂತರ ಪುನಃ ಕುದುರೆ ಹತ್ತಿ ಮುಂದೆ ಸಾಗುತ್ತಾನೆ.

ಟ್ವಿಟ್ಟರ್ ನಲ್ಲಿ ಇದನ್ನ ಕಂಡ ಅನೇಕರು ಮೆಚ್ಚಿಕೊಂಡಿದ್ದರೆ, ಇನ್ನೂ ಕೆಲವರು ಹಿಮಾವೃತ ರಸ್ತೆಗಳನ್ನು ತೆರವುಗೊಳಿಸಿ ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಬಾರದೆ ಎಂದು ಪ್ರಶ್ನಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...