alex Certify ಕೊರೊನಾ ಎಫೆಕ್ಟ್: ರಸ್ತೆ ಬದಿ ಕೇಕ್ ಮಾರಾಟ ಆರಂಭಿಸಿದ ಪ್ರಸಿದ್ಧ ಹೋಟೆಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಎಫೆಕ್ಟ್: ರಸ್ತೆ ಬದಿ ಕೇಕ್ ಮಾರಾಟ ಆರಂಭಿಸಿದ ಪ್ರಸಿದ್ಧ ಹೋಟೆಲ್

ವಿನ್ನಾಸ್: ಆಸ್ಟ್ರಿಯಾದ ವಿನ್ನಾಸ್ ನ ಪ್ರಸಿದ್ಧ ಸಾಚೇರ್ ಹೋಟೆಲ್ ನ ಚಾಕೊಲೆಟ್ ಕೇಕ್ ಈಗ ಬೀದಿ ಬೀದಿಗಳಲ್ಲಿ ಮಾರಾಟವಾಗುತ್ತಿದೆ.

ಹೋಟೆಲ್ ನಲ್ಲಿ ದ್ವಾರಪಾಲಕ ನಾಗಿದ್ದ ಔವಿ ಕೊಂಟೆಂಜೆಂಡೊರ್ಫರ್ ಈಗ ಹೋಟೆಲ್ ಪರವಾಗಿ ಗಾಡಿಯೊಂದರ ಮೂಲಕ ಕೇಕ್ ಮಾರಾಟ ಪ್ರಾರಂಭಿಸಿದ್ದಾರೆ. ಕೊರೊನಾ ಲಾಕ್ ಡೌನ್ ಕಾರಣ ಹೋಟೆಲ್ ಬಂದಾಗಿತ್ತು‌. ಈಗ ತೆರೆದರೂ ಪ್ರವಾಸಿಗರು ಬರುತ್ತಿಲ್ಲ. ಇದರಿಂದ ಹೋಟೆಲ್ ಉದ್ಯಮ ಹಾಗೂ ಅದರ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಸಾಚೆರ್ ಹೋಟೆಲ್ ಗ್ರಾಹಕರನ್ನು ಸೆಳೆಯುವ ಸಲುವಾಗಿ ಸಾಕಷ್ಟು ಅಲಂಕಾರ ಮಾಡಿಟ್ಟಿದೆ. ಪ್ರಸಿದ್ಧ ಕೇಕ್ ಬ್ರ್ಯಾಂಡ್ ನ್ನು ಬೀದಿಯಲ್ಲಿ ದೊರಕಿಸಿಕೊಡುತ್ತಿದೆ.

ಪ್ರತಿ ಕೇಕ್ 60 ರಿಂದ 70 ಡಾಲರ್ ಬೆಲೆಯಲ್ಲಿ ಮಾರಾಟ ಮಾಡಲಾಗುತ್ತಿದೆ. “ಇದೊಂದು ಉತ್ತಮ ಐಡಿಯಾ. ನಾನು ಜರ್ಮನಿಗೆ ಹೋಗುತ್ತಿದ್ದಾಗ ಕೇಕ್ ಪಡೆದೆ” ಎಂದು ಹೋಟೆಲ್ ನ ಕಾಯಂ ಗ್ರಾಹಕಿ ಕ್ಲೌಡಿಯಾ ಬ್ಲೆಂಡರ್ ಹೇಳಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...