alex Certify ಗ್ರಾಹಕರೇ ಗಮನಿಸಿ..! ಇನ್ನು ಮುಂದೆ ಮೊಬೈಲ್ ನಂಬರ್ 11 ಸಂಖ್ಯೆಗೆ ಹೆಚ್ಚಳ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರಾಹಕರೇ ಗಮನಿಸಿ..! ಇನ್ನು ಮುಂದೆ ಮೊಬೈಲ್ ನಂಬರ್ 11 ಸಂಖ್ಯೆಗೆ ಹೆಚ್ಚಳ

ನವದೆಹಲಿ: ಪ್ರಸ್ತುತ ಇರುವ 10 ಸಂಖ್ಯೆಯ ಮೊಬೈಲ್ ನಂಬರನ್ನು 11 ಸಂಖ್ಯೆಗೆ ಹೆಚ್ಚಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಶಿಫಾರಸ್ಸು ಮಾಡಿದೆ.

ಲ್ಯಾಂಡ್ ಲೈನ್ ನಿಂದ ಮೊಬೈಲ್ ಗೆ ಕರೆ ಮಾಡುವಾಗ 0 ಸೇರಿಸಬೇಕಿದೆ. ಈಗ ಇರುವ ಮೊಬೈಲ್ ಸಂಖ್ಯೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ಆದರೆ ಸ್ಥಿರ ದೂರವಾಣಿಯಿಂದ ಮೊಬೈಲ್ ಗೆ ಕರೆ ಮಾಡುವ ಮೊದಲು ಸೊನ್ನೆಯನ್ನು ಸೇರಿಸಿ ಡಯಲ್ ಮಾಡಬೇಕಿದೆ ಎಂದು ಹೇಳಲಾಗಿದೆ.

ಮೊಬೈಲ್ ನಿಂದ ಮೊಬೈಲ್ ಗೆ, ಮೊಬೈಲ್ ನಿಂದ ಸ್ಥಿರದೂರವಾಣಿಗಳಿಗೆ ಕರೆ ಮಾಡುವ ಮೊದಲು ಸೊನ್ನೆಯನ್ನು ಡಯಲ್ ಮಾಡುವ ಅಗತ್ಯವಿಲ್ಲ. ಈಗ ಇರುವ ಮೊಬೈಲ್ ಮತ್ತು ಸ್ಥಿರ ದೂರವಾಣಿಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಳಕ್ಕೆ ಅವಕಾಶ ನೀಡಲು ಈ ಶಿಫಾರಸನ್ನು ಮಾಡಲಾಗಿದೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...