alex Certify ವಿರುಷ್ಕಾ ದಂಪತಿಗೆ ವಿಶೇಷವಾಗಿ ಶುಭ ಕೋರಿದ ಅಮುಲ್​ ದ ಟೇಸ್ಟ್ ಆಫ್​ ಇಂಡಿಯಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿರುಷ್ಕಾ ದಂಪತಿಗೆ ವಿಶೇಷವಾಗಿ ಶುಭ ಕೋರಿದ ಅಮುಲ್​ ದ ಟೇಸ್ಟ್ ಆಫ್​ ಇಂಡಿಯಾ

ಹೆಣ್ಣು ಮಗುವಿಗೆ ಜನ್ಮ ನೀಡಿರುವ ವಿರುಷ್ಕಾ ದಂಪತಿಗೆ ವಿಶೇಷ ರೀತಿಯಲ್ಲಿ ಶುಭ ಕೋರುವ ಮೂಲಕ ಅಮುಲ್​ ಇಂಡಿಯಾ ಮತ್ತೊಮ್ಮೆ ಜನರ ಮನ ಗೆದ್ದಿದೆ. ಕಾರ್ಟೂನ್​ ಚಿತ್ರವೊಂದರಲ್ಲಿ ನಟಿ ಅನುಷ್ಕಾ ಶರ್ಮಾ ಹಾಗೂ ವಿರಾಟ್​ ಕೊಹ್ಲಿ ಇಬ್ಬರೂ ತಮ್ಮ ಮಧ್ಯೆ ಇರುವ ಮಗುವನ್ನ ನೋಡುತ್ತಿರುವಂತೆ ಚಿತ್ರಿಸಲಾಗಿದೆ. ಈ ಚಿತ್ರ ಮಾತ್ರ ಮನಸ್ಸನ್ನ ಗೆದ್ದಿದ್ದೆ ಅಂತಲ್ಲ. ಈ ಫೋಟೋ ಕೆಳಗೆ ಬರೆಯಲಾದ ಅಕ್ಷರವೂ ಮನಸ್ಸಿಗೆ ಖುಷಿ ನೀಡುವಂತಿದೆ. ಈ ಡೆಲಿವರಿಯಿಂದ ಬೋಲ್ಡ್​ ಆಗಿದ್ದೇವೆ. ಮನೆಗೆ ಸ್ವಾಗತ ಎಂದು ಬರೆಯಲಾಗಿದೆ.

ಇನ್​ಸ್ಟಾಗ್ರಾಂನಲ್ಲಿ ಈ ಫೋಟೋ ಶೇರ್​ ಮಾಡಲಾಗಿದ್ದು ವಿರುಷ್ಕಾ ಅಭಿಮಾನಿಗಳು ಕಮೆಂಟ್​ಗಳ ಸುರಿಮಳೆಯನ್ನೇ ಹರಿಸಿದ್ದಾರೆ. ಈ ಹಿಂದೆ ಅಂದರೆ ಆಗಸ್ಟ್​ ತಿಂಗಳಲ್ಲಿ ಕೊಹ್ಲಿ ದಂಪತಿ ತಾವು ಪೋಷಕರಾಗುತ್ತಿದ್ದೇವೆ ಎಂಬ ವಿಚಾರವನ್ನ ಬಹಿರಂಗಪಡಿಸಿದಾಗಲೂ ಸಹ, ವಿರುಷ್ಕಾ ಓನ್​ ದ ವೇ, ಬೆಣ್ಣೆ ಮಗನಿಗೋ ಮಗಳಿಗೋ ಎಂದು ಬರೆಯಲಾಗಿದ್ದ ಕಾರ್ಟೂನ್​ನ್ನ ಅಮುಲ್​ ಶೇರ್​ ಮಾಡಿತ್ತು. ಇದೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡಿತ್ತು.

View this post on Instagram

A post shared by Amul – The Taste of India (@amul_india)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...