alex Certify ಅಗ್ಗದ ದರದಲ್ಲಿ ವಿಮಾನ ಪ್ರಯಾಣಕ್ಕೆ ಇಲ್ಲಿದೆ ಅವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗ್ಗದ ದರದಲ್ಲಿ ವಿಮಾನ ಪ್ರಯಾಣಕ್ಕೆ ಇಲ್ಲಿದೆ ಅವಕಾಶ

ಕಡಿಮೆ ಬಜೆಟ್‌ನಲ್ಲಿ ವಿಮಾನ ಪ್ರಯಾಣ ಆನಂದಿಸಲು ಬಯಸಿದರೆ ನಿಮಗೊಂದು ಖುಷಿ ಸುದ್ದಿಯಿದೆ. ಸ್ಪೈಸ್ ‌ಜೆಟ್ ಮತ್ತು ಇಂಡಿಗೋ ಅಗ್ಗದ ಬೆಲೆಗೆ ವಿಮಾನ ಪ್ರಯಾಣಕ್ಕೆ ಅವಕಾಶ ನೀಡುತ್ತಿದೆ. ಈ ಎರಡೂ ಖಾಸಗಿ ವಲಯದ ವಿಮಾನಯಾನ ಸಂಸ್ಥೆಗಳು ಹೊಸ ವರ್ಷದಲ್ಲಿ ದೇಶೀಯ ವಿಮಾನ ಪ್ರಯಾಣಿಕರಿಗೆ ಭರ್ಜರಿ ಆಫರ್ ನೀಡ್ತಿವೆ.

ಸ್ಪೈಸ್ ಜೆಟ್, ಬುಕ್ ಸ್ಪೈಸ್ ಜೆಟ್ ಸೇಲ್ ಮೂಲಕ 899 ರೂಪಾಯಿಗಳಿಗೆ ವಿಮಾನ ಪ್ರಯಾಣಕ್ಕೆ ಅವಕಾಶ ನೀಡುತ್ತಿದೆ. ಇಂಡಿಗೊ ಹೊಸ ವರ್ಷದ ಮೊದಲ ಬಿಗ್ ಫ್ಯಾಟ್ ಇಂಡಿಗೊ ಮಾರಾಟವನ್ನು ಪ್ರಾರಂಭಿಸಿದೆ. ಕೇವಲ 877 ರೂಪಾಯಿಗೆ ಪ್ರಯಾಣ ಬೆಳೆಸಲು ಅವಕಾಶ ನೀಡ್ತಿದೆ. ಈ ಕೊಡುಗೆ ಇನ್ನೊಂದು ದಿನವಿರಲಿದೆ.

ಸ್ಪೈಸ್ ಜೆಟ್‌ ನಲ್ಲಿ ಜನವರಿ 22 ರವರೆಗೆ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕ ಈ ವರ್ಷ ಏಪ್ರಿಲ್ ನಿಂದ ಸೆಪ್ಟೆಂಬರ್ 30 ರವರೆಗೆ ಪ್ರಯಾಣಿಸಬಹುದು. ಕಂಪನಿಯು ಈ ಸೇಲ್ ಅಡಿಯಲ್ಲಿ ಕೆಲವು ಆಕರ್ಷಕ ಆಫರ್ ಘೋಷಿಸಿದೆ. ವಿಮಾನಯಾನ ಸಂಸ್ಥೆಯು ಪ್ರತಿ ಗ್ರಾಹಕರಿಗೆ ಪ್ರತಿ ಫ್ಲೈಟ್ ನ ಮೂಲ ಮೊತ್ತಕ್ಕೆ ಸಮಾನವಾದ ವೋಚರ್ ನೀಡ್ತಿದೆ. ಈ ವೋಚರನ್ನು ಫೆಬ್ರವರಿ 28ರವರೆಗ ಬಳಸಬಹುದು.ಈ ವೋಚರ್ ದೇಶೀಯ ವಿಮಾನಗಳಲ್ಲಿ ಮಾತ್ರ ಅನ್ವಯವಾಗುತ್ತದೆ. ಕನಿಷ್ಠ 5,550 ರೂಪಾಯಿಗಳ ಟಿಕೆಟ್ ಬುಕಿಂಗ್‌ನಲ್ಲಿ ಈ ಚೀಟಿ ಬಳಸಿ 1,000 ರೂಪಾಯಿಗಳವರೆಗೆ ರಿಯಾಯಿತಿ ಪಡೆಯಬಹುದು.

ಇಂಡಿಗೊ ಈ ಆಫರ್ ನಲ್ಲಿ ಟಿಕೆಟ್ ಪಡೆದವರು ಏಪ್ರಿಲ್ 1ರಿಂದ ಸೆಪ್ಟೆಂಬರ್ 30 ರ ನಡುವೆ ಪ್ರಯಾಣಿಸಬಹುದು. ಬಿಗ್ ಫ್ಯಾಟ್ ಸೇಲ್ ಆಫರ್ ಅಡಿಯಲ್ಲಿ ಎಷ್ಟು ಸೀಟುಗಳಿವೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...