alex Certify ಅಗ್ಗದ ಬೆಲೆಗೆ ಭರ್ಜರಿ ಕೊಡುಗೆಯೊಂದಿಗೆ ಜಿಯೋ 4ಜಿ ಸ್ಮಾರ್ಟ್‌ ಫೋನ್ ಲಭ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಗ್ಗದ ಬೆಲೆಗೆ ಭರ್ಜರಿ ಕೊಡುಗೆಯೊಂದಿಗೆ ಜಿಯೋ 4ಜಿ ಸ್ಮಾರ್ಟ್‌ ಫೋನ್ ಲಭ್ಯ

ತಮ್ಮ ನೂತನ 4ಜಿ ಸ್ಮಾಟ್‌ಫೋನ್‌ ಒಂದನ್ನು ಡಿಸೆಂಬರ್‌ನಲ್ಲಿ ಲಾಂಚ್‌ ಮಾಡಲು ರಿಲಯನ್ಸ್‌ ಜಿಯೋ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಈ ಸ್ಮಾರ್ಟ್‌‌ಫೋನ್‌ ಜೊತೆಗೆ ಆಕರ್ಷಕ ಡೇಟಾ ಪ್ಯಾಕೇಜ್‌ಗಳು ಹಾಗೂ ಇತರೆ ಲಾಭಗಳನ್ನು ಗ್ರಾಹರಿಗೆ ಕೊಡಲು ಜಿಯೋ ಪ್ಲಾನ್ ಮಾಡಿದೆ.

ಚೀನೀ ಬ್ರಾಂಡ್ ವಿವೋನ ’ವೈ’ ಸೀರೀಸ್ ಫೋನ್‌ಗಳನ್ನು ’ಜಿಯೋ ಎಕ್ಸ್‌ಕ್ಲೂಸಿವ್‌’ ಸ್ಮಾರ್ಟ್‌‌ಫೋನ್‌ಗಳನ್ನಾಗಿ ಬಿಡುಗಡೆ ಮಾಡಲು ಜಿಯೋ ಮುಂದಾಗಿದೆ. ಈ ಸ್ಮಾರ್ಟ್‌ಫೋನ್‌ನ ಬೆಲೆ 8000 ರೂ.ಗಳಷ್ಟು ಇರಲಿದೆ.

ಒಟಿಟಿ ಚಂದಾ ಮೇಲೆ ಡಿಸ್ಕೌಂಟ್‌ಗಳು, ಶಾಪಿಂಗ್‌ ಲಾಭಗಳು ಹಾಗೂ ಒನ್‌-ಟೈಮ್ ಸ್ಕ್ರೀನ್ ಬದಲಾವಣೆ ಸೇರಿದಂತೆ ಅನೇಕ ಅನುಕೂಲಗಳನ್ನು ಜಿಯೋ ಕನೆಕ್ಷನ್‌ನೊಂದಿಗೆ ಲಾಕ್ ಆಗಿರುವ ಹ್ಯಾಂಡ್‌ಸೆಟ್ ಖರೀದಿ ಮಾಡುವ ಮಂದಿಗೆ ಜಿಯೋ ಕೊಡಮಾಡಲಿದೆ. ಇದೇ ರೀತಿಯ ಸೇವೆಗಳಿಗೆಂದು ಲಾವಾ, ಕಾರ್ಬನ್‌ನಂಥ ಸ್ಮಾರ್ಟ್‌ಫೋನ್‌ ಬ್ರಾಂಡ್‌ಗಳೊಂದಿಗೆ ಜಿಯೋ ಮಾತುಕತೆಯಲ್ಲಿ ಭಾಗಿಯಾಗಿದೆ.

ಗೂಗಲ್‌ ಜೊತೆ ಪಾಲುದಾರಿಕೆಯಲ್ಲಿ ಅಗ್ಗದ 4ಜಿ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್‌ ಮಾಡಲು ಜಿಯೋ ಯೋಜನೆಗಳನ್ನು ಹೊಂದಿದೆ. ಇದೇ ಥರದ ಪ್ಲಾನ್‌ಗಳನ್ನು ಟೆಲಿಕಾಂ ಕ್ಷೇತ್ರದ ಮತ್ತೊಂದು ದಿಗ್ಗಜ ಏರ್‌ಟೆಲ್ ಸಹ ಮಾಡಿಕೊಳ್ಳುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...