alex Certify ಎರಡು ದಿನಗಳ ಉಚಿತ ಚಂದಾದಾರಿಕೆ ನೀಡ್ತಿದೆ ನೆಟ್ ಫ್ಲಿಕ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎರಡು ದಿನಗಳ ಉಚಿತ ಚಂದಾದಾರಿಕೆ ನೀಡ್ತಿದೆ ನೆಟ್ ಫ್ಲಿಕ್ಸ್

Netflix offer

ನೆಟ್ ಫ್ಲಿಕ್ಸ್ ಪ್ರಿಯರಿಗೆ ಸಂತೋಷದ ಸುದ್ದಿಯೊಂದಿದೆ. ಇನ್ನೂ ನೀವು ನೆಟ್ ಫ್ಲಿಕ್ಸ್ ಚಂದಾದಾರಿಗೆ ಪಡೆದಿಲ್ಲವೆಂದ್ರೆ ಕಂಪನಿ ನಿಮಗೆ ಉಚಿತ ಚಂದಾದಾರಿಗೆ ನೀಡ್ತಿದೆ. ಕೇವಲ ಎರಡು ದಿನಕ್ಕೆ ಚಂದಾದಾರಿಕೆ ನೀಡ್ತಿದೆ. 48 ಗಂಟೆಗಳ ಪ್ರಯೋಗವನ್ನು ಸ್ಟ್ರೀಮ್‌ಫೆಸ್ಟ್ ಅಡಿಯಲ್ಲಿ ನೀಡಲಿದೆ.

ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸಲು ಕಂಪನಿಯು ಈ ಪ್ರಸ್ತಾಪವನ್ನು ಘೋಷಿಸಿದೆ. ನೆಟ್‌ಫ್ಲಿಕ್ಸ್ ಇಲ್ಲದಿದ್ದರೆ ಎರಡು ದಿನಗಳವರೆಗೆ ನೆಟ್‌ಫ್ಲಿಕ್ಸ್ ನಲ್ಲಿ ಸರಣಿ ಅಥವಾ ಚಲನಚಿತ್ರಗಳನ್ನು ಉಚಿತವಾಗಿ ವೀಕ್ಷಿಸಬಹುದು. ನೆಟ್ಫ್ಲಿಕ್ಸ್ ಸಾಮಾನ್ಯವಾಗಿ ಒಂದು ತಿಂಗಳ ಟ್ರಯಲ್ ನೀಡುತ್ತದೆ. ಆದರೆ ಇತ್ತೀಚೆಗೆ ಕಂಪನಿಯು ಒಂದು ತಿಂಗಳ ಪ್ರಾಯೋಗಿಕ ಪ್ರಸ್ತಾಪವನ್ನು ರದ್ದುಗೊಳಿಸಿದೆ.

ಈ ಕೊಡುಗೆ ಪ್ರಸ್ತುತ ಭಾರತೀಯ ಗ್ರಾಹಕರಿಗೆ ಮಾತ್ರ ಲಭ್ಯವಿದೆ. ಡಿಸೆಂಬರ್ 4 ರಿಂದ ಈ ಆಫರ್ ಪ್ರಾರಂಭವಾಗಲಿದೆ. ಇದ್ರಲ್ಲಿ ಕ್ರೆಡಿಟ್ ಕಾರ್ಡ್ ಅಥವಾ ಇತರ ಪಾವತಿ ಮಾಹಿತಿಯನ್ನು ನೀಡಬೇಕಾಗಿಲ್ಲ. ಈ ಮೊದಲು 1 ತಿಂಗಳ ಉಚಿತ ಟ್ರಯಲ್ ನೀಡಿದಾಗ ಬಳಕೆದಾರರು ಪಾವತಿ ವಿವರಗಳನ್ನು ಭರ್ತಿ ಮಾಡಬೇಕಾಗಿತ್ತು. ನೆಟ್ಫ್ಲಿಕ್ಸ್ ನ್ನು ದೇಶದ ಎಲ್ಲ ಜನರಿಗೆ ವಾರಾಂತ್ಯದಲ್ಲಿ ಉಚಿತವಾಗಿ ನೀಡಿದರೆ, ಅದು ಹೆಚ್ಚಿನ ಜನರನ್ನು ತಲುಪಬಹುದು ಎಂದು ಕಂಪನಿ ಆಶಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...