alex Certify LPG ಗ್ರಾಹಕರಿಗೊಂದು ‘ಗುಡ್ ನ್ಯೂಸ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

LPG ಗ್ರಾಹಕರಿಗೊಂದು ‘ಗುಡ್ ನ್ಯೂಸ್’

ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್  ತನ್ನ ಗ್ರಾಹಕರಿಗೆ ಹೊಸ ಸೌಲಭ್ಯವನ್ನು ಬಿಡುಗಡೆ ಮಾಡಿದೆ. ಇದರ ಅಡಿಯಲ್ಲಿ ಬಿಪಿಸಿಎಲ್ ಗ್ರಾಹಕರು  ವಾಟ್ಸಾಪ್ ಮೂಲಕ ಎಲ್ಪಿಜಿ ಬುಕ್ ಮಾಡಲು ಸಾಧ್ಯವಾಗುತ್ತದೆ.

ದೇಶಾದ್ಯಂತ ಇರುವ ಗ್ರಾಹಕರು ಅಡುಗೆ ಗ್ಯಾಸ್ ಸಿಲಿಂಡರ್ ಗಳನ್ನು ವಾಟ್ಸಾಪ್ ಮೂಲಕ ಎಲ್ಲಿಂದಲಾದರೂ ಬುಕ್ ಮಾಡಬಹುದು ಎಂದು ಬಿಪಿಸಿಎಲ್ ಹೇಳಿಕೆಯಲ್ಲಿ ತಿಳಿಸಿದೆ. ಕಂಪನಿಯ ಪ್ರಕಾರ, ಈ ಬುಕಿಂಗ್ ವಾಟ್ಸಾಪ್ ನಲ್ಲಿ ಬಿಪಿಸಿಎಲ್ ಸ್ಮಾರ್ಟ್ಲೈನ್ ​​ಸಂಖ್ಯೆ 1800224344 ಮೂಲಕ ಮಾಡಬಹುದು. ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ ಬುಕಿಂಗ್ ಮಾಡಬೇಕು.

ಬಿಪಿಸಿಎಲ್ ಅಧಿಕಾರಿ ಅರುಣ್ ಸಿಂಗ್ ಪ್ರಕಾರ, ಎಲ್ಪಿಜಿ ಬುಕಿಂಗ್ ಮಾಡುವುದು ಇದ್ರಿಂದ ಗ್ರಾಹಕರಿಗೆ ಸುಲಭವಾಗಲಿದೆ. ವಾಟ್ಸಾಪ್ ಈಗ ಸಾಮಾನ್ಯ ಜನರಲ್ಲಿ ಬಹಳ ಸಾಮಾನ್ಯವಾಗಿದೆ. ಯುವಕರು ಅಥವಾ ವಯಸ್ಸಾದವರು ಎಲ್ಲರೂ ಇದನ್ನು ಬಳಸುತ್ತಾರೆ ಮತ್ತು ಈ ಹೊಸ ಪ್ರಾರಂಭದೊಂದಿಗೆ ನಾವು ನಮ್ಮ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗುತ್ತೇವೆ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...