alex Certify ರೈತರಿಗೆ ಸಾಲ: ಯಡಿಯೂರಪ್ಪ ಸರ್ಕಾರದಿಂದ ಮತ್ತೊಂದು ಭರ್ಜರಿ ಸಿಹಿಸುದ್ದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರೈತರಿಗೆ ಸಾಲ: ಯಡಿಯೂರಪ್ಪ ಸರ್ಕಾರದಿಂದ ಮತ್ತೊಂದು ಭರ್ಜರಿ ಸಿಹಿಸುದ್ದಿ

ಬೆಂಗಳೂರು: ರೈತರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ ನೀಡಲಾಗಿದ್ದು, 3 ಲಕ್ಷ ರೂಪಾಯಿವರೆಗೆ ಬಡ್ಡಿ ರಹಿತ ಸಾಲ ನೀಡಲು ನಿಯಮಗಳನ್ನು ಪರಿಷ್ಕರಿಸಲಾಗಿದೆ.

ಪ್ರತ್ಯೇಕವಾಗಿ 3 -4 ಮಂದಿ ಅಣ್ಣ ತಮ್ಮಂದಿರಿಗೂ ಸಾಲ ನೀಡಲಾಗುವುದು. ರೈತರು ಸರ್ಕಾರಿ ನೌಕರರಾಗಿದ್ದರೂ ಸಾಲ ಸೌಲಭ್ಯ ಪಡೆಯಬಹುದಾಗಿದೆ ಎಂದು ಸಹಕಾರ ಇಲಾಖೆಯಿಂದ ಶುಕ್ರವಾರ ಆದೇಶ ಹೊರಡಿಸಲಾಗಿದೆ.

ಒಂದೇ ರೈತ ಕುಟುಂಬದಲ್ಲಿ ಒಬ್ಬರಿಗಿಂತ ಹೆಚ್ಚು ಮಂದಿ ಬಡ್ಡಿ ರಹಿತ ಸಾಲ ಪಡೆಯಲು ಅಡ್ಡಿಯಾಗಿದ್ದ ಷರತ್ತುಗಳನ್ನು ಸಡಿಲಗೊಳಿಸಲಾಗಿದೆ. ಅದೇ ರೀತಿ ಸರ್ಕಾರಿ ನೌಕರರಾಗಿರುವ ರೈತರು ಕೂಡ ಸಾಲ ಪಡೆಯಬಹುದಾಗಿದೆ. ಒಂದೇ ಕುಟುಂಬದಲ್ಲಿರುವ ಅಣ್ಣತಮ್ಮಂದಿರು ಪ್ರತ್ಯೇಕ ಪಹಣಿ, ಸಾಗುವಳಿ ಪತ್ರ ಹೊಂದಿದ್ದರೆ ಸಾಲವನ್ನು ಪಡೆಯಬಹುದು. ಮೂರು ಲಕ್ಷ ರೂಪಾಯಿವರೆಗೆ ಬಡ್ಡಿ ದರದ ಸಾಲ ನೀಡಲಾಗುವುದು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...