alex Certify ATM ಗೆ ಹಣ ಡ್ರಾ ಮಾಡಲು ಹೋಗುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ATM ಗೆ ಹಣ ಡ್ರಾ ಮಾಡಲು ಹೋಗುವ ಮುನ್ನ ನಿಮಗೆ ತಿಳಿದಿರಲಿ ಈ ವಿಷಯ….!

ಬೇರೆ ಬ್ಯಾಂಕಿನ ಎಟಿಎಂನಿಂದ ಹಣ ವಿತ್​ ಡ್ರಾ ಮಾಡಿದ್ರೆ ಸಂಬಂಧಪಟ್ಟ ಬ್ಯಾಂಕುಗಳು ಶುಲ್ಕ ವಿಧಿಸುವ ವಿಚಾರ ಎಲ್ಲರಿಗೂ ತಿಳಿದೇ ಇದೆ. ಆದರೆ ನೀವು ಎಟಿಎಂನಿಂದ ಡ್ರಾ ಮಾಡೋಕೆ ಹೊರಟ ಹಣಕ್ಕಿಂತ ಕಡಿಮೆ ಮೊತ್ತ ನಿಮ್ಮ ಬ್ಯಾಂಕಿನಲ್ಲಿದ್ದರೆ ನಿಮಗೆ ಬ್ಯಾಂಕ್​ ಶುಲ್ಕ ವಿಧಿಸುತ್ತೆ ಅನ್ನೋ ವಿಚಾರ ಬಹುತೇಕ ಗ್ರಾಹಕರಿಗೆ ತಿಳಿದೇ ಇಲ್ಲ.

ಹೀಗಾಗಿ ಎಟಿಎಂನಿಂದ ಹಣ ಡ್ರಾ ಮಾಡುವ ಮೊದಲು ನಿಮ್ಮ ಖಾತೆಯಲ್ಲಿನ ಮೊತ್ತವನ್ನ ಪರಿಶೀಲನೆ ಮಾಡಿಕೊಳ್ಳೋದು ಒಳ್ಳೆಯದು.

ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿದುಕೊಳ್ಳೋಕೆ ನಿಮಗೆ ಹಲವು ಮಾರ್ಗಗಳು ಗೊತ್ತಿರಬಹುದು. ಆದರೆ ಈ ರೀತಿ ಖಾತೆಯಲ್ಲಿದ್ದಕ್ಕಿಂತ ಹೆಚ್ಚು ಹಣವನ್ನ ಎಟಿಎಂನಲ್ಲಿ ನಮೂದಿಸಿ ನೀವು ಮಾಡುವ ವ್ಯವಹಾರಕ್ಕೆ ಬ್ಯಾಂಕ್​ಗಳು ಎಷ್ಟು ಶುಲ್ಕ ವಿಧಿಸುತ್ತವೆ ಅನ್ನೋದ್ರ ಬಗ್ಗೆ ಇಲ್ಲಿದೆ ಮಾಹಿತಿ.

ಇಂತಹ ವಿಫಲ ವಹಿವಾಟುಗಳಿಗೆ ಕನಿಷ್ಟ 10 ರೂ. + ಜಿ.ಎಸ್.ಟಿ. ವಿಧಿಸಲಾಗುತ್ತದೆ. ಈ ಹಣ ವಿವಿಧ ಬ್ಯಾಂಕುಗಳ ಮೇಲೆಯೇ ಅವಲಂಬಿಸಿರಬಹುದು. ಹೀಗಾಗಿ ಇನ್ಮುಂದೆ ಎಟಿಎಂನಿಂದ ಹಣ ಡ್ರಾ ಮಾಡುವ ಮುನ್ನ ನಿಮ್ಮ ಖಾತೆಯಲ್ಲಿನ ಮೊತ್ತವನ್ನ ಒಮ್ಮೆ ಪರಿಶೀಲನೆ ಮಾಡಿಕೊಂಡಲ್ಲಿ ಅನಗತ್ಯ ಶುಲ್ಕದ ಹೊರೆಯಿಂದ ಪಾರಾಗಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...