alex Certify ವಿದ್ಯುತ್ ಬಿಲ್ ಮನ್ನಾ, ವಿನಾಯಿತಿ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಸಂಪರ್ಕ ಕಡಿತ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯುತ್ ಬಿಲ್ ಮನ್ನಾ, ವಿನಾಯಿತಿ ನಿರೀಕ್ಷೆಯಲ್ಲಿದ್ದವರಿಗೆ ಬಿಗ್ ಶಾಕ್: ಸಂಪರ್ಕ ಕಡಿತ ಸಾಧ್ಯತೆ

ಕೊರೋನಾ ಸಂಕಷ್ಟದ ಕಾರಣ ವಿದ್ಯುತ್ ಬಿಲ್ ಕಟ್ಟದವರಿಗೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇದೆ. ವಿದ್ಯುತ್ ಕಂಪನಿಗಳು ಹಳೆ ಬಾಕಿಯನ್ನು ಒಂದೇ ಕಂತಿನಲ್ಲಿ ಕಟ್ಟುವಂತೆ ಸೂಚನೆ ನೀಡಿದ್ದು ಗ್ರಾಹಕರಿಗೆ ಸಂಕಷ್ಟ ಎದುರಾಗಿದೆ ಎನ್ನಲಾಗಿದೆ.

ಕೊರೋನಾ ಲಾಕ್ಡೌನ್ ಕಾರಣದಿಂದಾಗಿ ಅನೇಕರು ವಿದ್ಯುತ್ ಬಿಲ್ ಪಾವತಿ ಮಾಡಿಲ್ಲ. ಇದರಿಂದಾಗಿ ಬಾಕಿ ಮೊತ್ತ ಹೆಚ್ಚಳವಾಗಿದ್ದು ಒಂದೇ ಕಂತಿನಲ್ಲಿ ಕಟ್ಟುವಂತೆ ಸೂಚನೆ ನೀಡುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ ಎಂದು ಹೇಳಲಾಗಿದೆ.

ವಿದ್ಯುತ್ ಬಿಲ್ ಮನ್ನಾ ಆಗಬಹುದು, ಇಲ್ಲವೇ ವಿನಾಯಿತಿ ನೀಡಬಹುದು ಎನ್ನುವ ನಿರೀಕ್ಷೆಯಲ್ಲಿದ್ದ ಅನೇಕರು ವಿದ್ಯುತ್ ಬಿಲ್ ಪಾವತಿಸಿಲ್ಲ. ವಿದ್ಯುತ್ ಕಂಪನಿಗಳು ನಷ್ಟದಲ್ಲಿದ್ದು ಬಾಕಿ ಮೊತ್ತ ವಸೂಲಿಗೆ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿವೆ. ಈಗ ಒಂದೇ ಸಲಕ್ಕೆ ನಾಲ್ಕೈದು ತಿಂಗಳ ಬಿಲ್ ಪಾವತಿ ಮಾಡಬೇಕಿದೆ. ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗದ ಗ್ರಾಹಕರಿಗೆ ಸಂಪರ್ಕ ಕಡಿತ ಭೀತಿ ಎದುರಾಗಿದೆ ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...