alex Certify ಬೈಕ್ ಪ್ರಿಯರಿಗೆ ಭರ್ಜರಿ ಖುಷಿ ಸುದ್ದಿ: ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಈ ಮೋಟಾರ್ ಸೈಕಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೈಕ್ ಪ್ರಿಯರಿಗೆ ಭರ್ಜರಿ ಖುಷಿ ಸುದ್ದಿ: ಅತ್ಯಂತ ಕಡಿಮೆ ಬೆಲೆಗೆ ಲಭ್ಯವಾಗಲಿದೆ ಈ ಮೋಟಾರ್ ಸೈಕಲ್

ಮೋಟಾರ್​ ಸೈಕಲ್​ ಹೊಂದಬೇಕು ಅನ್ನೋ ಆಸೆ ಯಾರಿಗ್​ ತಾನೇ ಇರಲ್ಲ ಹೇಳಿ. ಮಧ್ಯಮ ವರ್ಗದ ಜನರ ಅತ್ಯಂತ ಪ್ರಿಯವಾದ ವಾಹನ ಅಂದ್ರೇನೆ ಮೋಟಾರ್​ ಸೈಕಲ್​. ಅನೇಕ ಕಂಪನಿಗಳು ಕೂಡ ಗ್ರಾಹಕರನ್ನ ಸೆಳೆಯೋಕೆ ವಿವಿಧ ಆಫರ್​ಗಳನ್ನ ಕೊಡುತ್ತಾನೇ ಇರುತ್ತೆ.

ಸ್ಟಾರ್ಟ್​ ಕಂಪನಿ ಡೆಟೆಲ್​ ಈಗಾಗಲೇ ಅತ್ಯಂತ ಕಡಿಮೆ ದರಕ್ಕೆ ಎಲೆಕ್ಟ್ರಾನಿಕ್​ ವಸ್ತುಗಳನ್ನ ಮಾರುಕಟ್ಟೆಗೆ ಪರಿಚಯಿಸೋದ್ರ ಮೂಲಕ ಫೇಮಸ್​ ಆಗಿದೆ. ಕೇವಲ 299 ರೂ.ಗೆ ಮೊಬೈಲ್​ ಹಾಗೂ 3999 ರೂಪಾಯಿಗೆ ಎಲ್​ಇಡಿ ಟಿವಿಯನ್ನ ಪರಿಚಯಿಸಿದ್ದ ಡೆಟೆಲ್​ ಇದೀಗ ಅತ್ಯಂತ ಕಡಿಮೆ ದರಕ್ಕೆ ದೇಶದಲ್ಲಿ ಮೊಟಾರ್​ ಸೈಕಲ್​ನ್ನ ಪರಿಚಯಿಸಿದೆ.

ಡೆಟೆಲ್​ ಕಂಪನಿಯ ಈ ಮೋಟಾರ್​ ಸೈಕಲ್​ನ ಬೆಲೆ ಕೇವಲ 19,999 ರೂಪಾಯಿ. ಈ ಬೈಕ್​ಗೆ ಕಡಿಮೆ ದರ ಮಾತ್ರವಲ್ಲದೇ ಮೈಲೇಜ್​ ಕೂಡ ಚೆನ್ನಾಗಿ ಕೊಡಲಿದೆ ಎಂದು ಕಂಪನಿ ಹೇಳಿದೆ. ಕಂಪನಿ ವೆಬ್​ಸೈಟ್​ ಮೂಲಕ ಗ್ರಾಹಕರು ಈ ಕಡಿಮೆ ಬೆಲೆಯ ಮೊಟಾರ್​ ಸೈಕಲ್​ನ್ನು ಖರೀದಿ ಮಾಡಬಹುದಾಗಿದೆ.

ಡೆಟಾಲ್​ ದ್ವಿಚಕ್ರ ವಾಹನ 250 ವ್ಯಾಟ್​ ಎಲೆಕ್ಟ್ರಿಕ್​ ಮೋಟಾರ್ ಹೊಂದಿದೆ. ಈ ಮೋಟಾರ್ ಸೈಕಲ್​ ಪ್ರತಿ ಗಂಟೆಗೆ 25 ಕಿಲೋಮೀಟರ್​ ವೇಗದಲ್ಲಿ ಓಡುತ್ತೆ. ಮೋಟಾರ್ ಸೈಕಲ್​ನ ಬ್ಯಾಟರಿಯನ್ನ 7 ರಿಂದ 8 ಗಂಟೆಯ ಅವಧಿಯಲ್ಲಿ ಫುಲ್​ ಚಾರ್ಜ್​ ಮಾಡಬಹುದಾಗಿದೆ. ಒಮ್ಮೆ ಪೂರ್ತಿ ಚಾರ್ಜ್​ ಮಾಡಿದ ಬಳಿಕ ಮೊಟಾರ್​ ಸೈಕಲ್​ನ್ನ 60 ಕಿಲೋಮೀಟರ್​ವರೆಗೆ ಓಡಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...