alex Certify BIG NEWS: ಚೇತರಿಕೆ ಹಾದಿಯಲ್ಲಿ ಕುಸಿತ ಕಂಡಿದ್ದ ಆಟೋಮೊಬೈಲ್ ಉದ್ಯಮ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚೇತರಿಕೆ ಹಾದಿಯಲ್ಲಿ ಕುಸಿತ ಕಂಡಿದ್ದ ಆಟೋಮೊಬೈಲ್ ಉದ್ಯಮ…!

ದೇಶದಲ್ಲಿ ಕೊರೊನಾ ವೈರಸ್ ಕಾಣಿಸಿಕೊಳ್ಳುವ ಮೊದಲೇ ಆಟೊಮೊಬೈಲ್ ಉದ್ಯಮ ಕುಸಿತ ಕಂಡಿದ್ದು, ಆರ್ಥಿಕ ಸಂಕಷ್ಟವನ್ನು ಎದುರಿಸಿದ್ದವು. ಹೀಗಾಗಿ ಇದನ್ನು ಸರಿದೂಗಿಸಲು ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, ಲಕ್ಷಾಂತರ ಮಂದಿ ನಿರುದ್ಯೋಗಿಗಳಾಗಿದ್ದರು.

ಇದರ ಮಧ್ಯೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ ಪರಿಣಾಮ ಒಂದು ತಿಂಗಳಿಗೂ ಅಧಿಕ ಕಾಲದಿಂದ ಆಟೊಮೊಬೈಲ್ ಉದ್ಯಮ ಸಂಪೂರ್ಣವಾಗಿ ನೆಲಕಚ್ಚಿತ್ತು. ಇದೀಗ ಈ ಕ್ಷೇತ್ರ ಚೇತರಿಕೆ ಹಾದಿ ಹಿಡಿಯಲಿದೆ ಎನ್ನಲಾಗಿದೆ.

ಅದರಲ್ಲೂ ಕಾರುಗಳ ಮಾರಾಟ ಹೆಚ್ಚಾಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದಕ್ಕೆ ಕೊರೊನಾ ಕಾರಣ ಎಂಬುದು ಅಚ್ಚರಿಯಾದರೂ ನಿಜ. ಕೊರೊನಾ ಸೋಂಕು ತಗಲುವುದೆಂಬ ಭಯದಿಂದ ಜನ ಸಾರ್ವಜನಿಕ ಸಾರಿಗೆ ಏರಲು ಹಿಂದೇಟು ಹಾಕುತ್ತಿದ್ದು, ಹೀಗಾಗಿ ಸ್ವಂತ ಕಾರು ಖರೀದಿಸಲು ಚಿಂತನೆ ನಡೆಸುತ್ತಿದ್ದಾರೆನ್ನಲಾಗಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕಡಿಮೆ ಬಜೆಟ್ ನ ಸಣ್ಣ ಕಾರುಗಳ ಮಾರಾಟದ ಜೊತೆಗೆ ದುಬಾರಿ ಕಾರುಗಳು ಮಾರಾಟವೂ ಹೆಚ್ಚಳವಾಗಲಿದೆ ಎಂದು ಹೇಳಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...