alex Certify ತಲೆ ತಿರುಗಿಸುತ್ತೆ ಭಾರತದ ಮಾರುಕಟ್ಟೆಗೆ ಕಾಲಿಟ್ಟ ಆಸ್ಟಿನ್ ಮಾರ್ಟಿನ್ ಎಸ್‌ಯುವಿ ಕಾರಿನ ಬೆಲೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಲೆ ತಿರುಗಿಸುತ್ತೆ ಭಾರತದ ಮಾರುಕಟ್ಟೆಗೆ ಕಾಲಿಟ್ಟ ಆಸ್ಟಿನ್ ಮಾರ್ಟಿನ್ ಎಸ್‌ಯುವಿ ಕಾರಿನ ಬೆಲೆ…!

ಬ್ರಿಟನ್‌ನ ಲಕ್ಸುರಿ ಕಾರು ಉತ್ಪಾದಕ ಆಸ್ಟಿನ್ ಮಾರ್ಟಿನ್ ತನ್ನ ಮೊಟ್ಟ ಮೊದಲ ಎಸ್‌ಯುವಿ ಆದ ಡಿಬಿಎಕ್ಸ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಕಾರಿನ ಬೆಲೆ (ಎಕ್ಸ್‌ ಶೋರೂಂ) 3.82 ಕೋಟಿ ರೂ.ಗಳು ಇರಲಿದೆ.

ಈ ಬೆಲೆಯು ಬರೀ ಕಾರಿಗೆ ಮಾತ್ರವಾಗಿದ್ದು, ಅಕ್ಸೆಸರೀಸ್‌ಗೆ ಹೆಚ್ಚುವರಿ ಖರ್ಚು ಮಾಡಬೇಕಾಗುತ್ತದೆ. ಐದು ವರ್ಷಗಳ ಹಿಂದೆ ಡಿಬಿಎಕ್ಸ್‌ ಅಭಿವೃದ್ಧಿ ಆರಂಭಿಸಿದ 108 ವರ್ಷ ಹಳೆಯ ಕಾರು ಉತ್ಪಾದಕ ಸಂಸ್ಥೆ ಕಳೆದ ವರ್ಷವಷ್ಟೇ ತನ್ನ ಹೊಸ ಕಾರಿನ ಪ್ರಯೋಗಾರ್ಥ ಓಡಾಟ ಆರಂಭಿಸಿತ್ತು.

ತನ್ನ ಟಿಪಿಕಲ್ ಡಿಬಿ ಗ್ರಿಲ್, ದೊಡ್ಡದಾದ 22 ಇಂಚಿನ ಅಲಾಯ್‌ಗಳು, ಫ್ರೇಮ್‌ರಹಿತ ಡೋರ್‌ಗಳು, ಎಲ್‌ಇಡಿ ಟೇಲ್ ‌ಲೈಟ್‌ಗಳು, ಡಕ್‌ಟೇಲ್‌ ಬೂಟ್‌ ಲಿಡ್‌ ಸ್ಪಾಯ್ಲರ್‌‌, ಜೋಡಿ ಎಕ್ಸಾಸ್ಟ್‌ಗಳಂಧ ಫೀಚರ್‌ಗಳನ್ನು ಈ ಕಾರು ಹೊಂದಿದೆ.

ಐವರು ಕುಳಿತು ಪಯಣಿಸಬಹುದಾದ ಈ ಕಾರಿನಲ್ಲಿ ಅತ್ಯಾಧುನಿಕ ಕಾರುಗಳಲ್ಲಿರುವ ಎಲ್ಲಾ ಸುರಕ್ಷತೆ ಹಾಗೂ ಐಷಾರಾಮಿ ಸೌಲಭ್ಯಗಳಿವೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...