alex Certify ʼಆಧಾರ್‌ʼ ಕಳೆದುಹೋಗಿದೆಯಾ…? ಚಿಂತೆ ಬೇಡ ಹೊಸ ಕಾರ್ಡ್‌ ಪಡೆಯಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಧಾರ್‌ʼ ಕಳೆದುಹೋಗಿದೆಯಾ…? ಚಿಂತೆ ಬೇಡ ಹೊಸ ಕಾರ್ಡ್‌ ಪಡೆಯಲು ಇಲ್ಲಿದೆ ಮಾಹಿತಿ

ನಿಮ್ಮ ಆಧಾರ್‌ ಕಾರ್ಡ್ ಕಳೆದು ಹೋಗಿದ್ದಲ್ಲಿ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಆಧಾರ್‌ ಕಾರ್ಡ್‌‌ನ ಮರುಮುದ್ರಣಕ್ಕೆ ಕೋರುವ ಅವಕಾಶವನ್ನು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (UIDAI) ಕೊಡಮಾಡಿದೆ.

ಆಧಾರ್‌ ಕಾರ್ಡ್ ಮಾಡಿಸಿಕೊಳ್ಳುವಾಗ ನೀಡಲಾದ ಚೀಟಿಯಲ್ಲಿರುವ ನೋಂದಣಿ ಸಂಖ್ಯೆ ಇದ್ದಲ್ಲಿ, UIDAI ಜಾಲತಾಣಕ್ಕೆ ಭೇಟಿ ಕೊಟ್ಟು ಆಧಾರ್‌ ಕಾರ್ಡ್‌ನ ಮತ್ತೊಂದು ಪ್ರತಿಯನ್ನು ಪಡೆದುಕೊಳ್ಳಬಹುದಾಗಿದೆ.

ಇದಕ್ಕಾಗಿ 50 ರೂ.ಗಳ ಶುಲ್ಕವನ್ನು ತೆತ್ತರೆ 15 ದಿನಗಳ ಒಳಗೆ ನಿಮ್ಮ ಆಧಾರ್‌ ಕಾರ್ಡ್‌ ಮನೆ ಸೇರಲಿದೆ. ಇದಲ್ಲದೇ, ನಿಮ್ಮ ವಿಳಾಸವನ್ನು ಬದಲಿಸಬೇಕಾದಲ್ಲಿ ನಿಮ್ಮ ಹತ್ತಿರದ ಆಧಾರ್‌ ಕೇಂದ್ರಕ್ಕೆ ಭೇಟಿ ನೀಡಿ, UIDAI ಕೊಡಮಾಡಿರುವ 44 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಸಲ್ಲಿಸಿ ಪರಿಷ್ಕರಣೆ ಮಾಡಿಸಿಕೊಳ್ಳಬೇಕಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...