alex Certify 10 ಲಕ್ಷ ಮಂದಿ ಖರೀದಿಸಿದ್ದಾರೆ 5000 ಎಂಎಎಚ್ ಬ್ಯಾಟರಿಯ ಅಗ್ಗದ ಮೊಬೈಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ಲಕ್ಷ ಮಂದಿ ಖರೀದಿಸಿದ್ದಾರೆ 5000 ಎಂಎಎಚ್ ಬ್ಯಾಟರಿಯ ಅಗ್ಗದ ಮೊಬೈಲ್

ಬಜೆಟ್ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಪೊಕೊದ ಸ್ಮಾರ್ಟ್ಫೋನ್ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. 10 ಲಕ್ಷ ಸ್ಮಾರ್ಟ್ಫೋನ್ ಮಾರಾಟ ಮಾಡಿದೆ. ಭಾರತದಲ್ಲಿ 10 ಲಕ್ಷ ಪೊಕೊ ಸಿ 3 ಸ್ಮಾರ್ಟ್ಫೋನ್ ಮಾರಾಟವಾಗಿದೆ ಎಂದು ಕಂಪನಿ ಹೇಳಿದೆ. ಈ ಸ್ಮಾರ್ಟ್ಫೋನ್ ಕೇವಲ 6999 ರೂಪಾಯಿ ಆರಂಭಿಕ ಬೆಲೆಗೆ ಲಭ್ಯವಿದೆ.

ಫ್ಲಿಪ್ಕಾರ್ಟ್ ನಲ್ಲಿ ಸದ್ಯ ಬಿಗ್ ಸೇವಿಂಗ್ ಡೇ ನಡೆಯುತ್ತಿದೆ. ಜನವರಿ 24ರಂದು ಈ ಸೇಲ್ ಮುಗಿಯಲಿದೆ. ಪೊಕೊ ಸಿ 3ಯ 3ಜಿಬಿ ರ್ಯಾಮ್ ಹಾಗೂ 32 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ 6,999 ರೂಪಾಯಿ. 4ಜಿಬಿ ರ್ಯಾಮ್ ಹಾಗೂ 64 ಜಿಬಿ ಸ್ಟೋರೇಜ್ ಬೆಲೆ 7999 ರೂಪಾಯಿಗೆ ಮಾರಾಟವಾಗ್ತಿದೆ. ಇದಲ್ಲದೆ ಹೆಚ್ಡಿಎಫ್ ಸಿ ಬ್ಯಾಂಕ್ ಕಾರ್ಡ್ ನಲ್ಲಿ ಮೊಬೈಲ್ ಖರೀದಿ ಮಾಡಿದ್ರೆ ಶೇಕಡಾ 10ರಷ್ಟು ರಿಯಾಯಿತಿ ಸಿಗ್ತಿದೆ.

ಪೊಕೊ ಸಿ 3 ಮೂರು ಬಣ್ಣಗಳಲ್ಲಿ ಲಭ್ಯವಿದೆ. ಅಗ್ಗದ ಬೆಲೆಯ ಮೊಬೈಲ್ 5000ಎಂಎಎಚ್ ಬ್ಯಾಟರಿ ಹೊಂದಿದೆ. ಫೋನ್ ಹಿಂಬದಿಯಲ್ಲಿ ಮೂರು ಕ್ಯಾಮರಾಗಳನ್ನು ಹೊಂದಿದೆ. ಸೆಲ್ಫಿಗಾಗಿ 5 ಮೆಗಾಫಿಕ್ಸಲ್ ಕ್ಯಾಮರಾವನ್ನು ನೀಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...