alex Certify ಹಿರಿಯ ನಾಗರಿಕರಿಗೆ ಈ 3 ಬ್ಯಾಂಕ್ ನೀಡಿದೆ ವಿಶೇಷ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿರಿಯ ನಾಗರಿಕರಿಗೆ ಈ 3 ಬ್ಯಾಂಕ್ ನೀಡಿದೆ ವಿಶೇಷ ಆಫರ್

ದೇಶದ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಎಸ್‌ಬಿಐ ಮತ್ತು ಖಾಸಗಿ ವಲಯದ ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್   ಹಿರಿಯ ನಾಗರಿಕರಿಗೆ ಸ್ಥಿರ ಠೇವಣಿ ಕುರಿತು ವಿಶೇಷ ಕೊಡುಗೆಗಳನ್ನು ನೀಡ್ತಿದೆ. ಬಡ್ಡಿ ದರಗಳಲ್ಲಿ ಭಾರಿ ಇಳಿಕೆಯಾದ ಈ ಸಮಯದಲ್ಲಿ  ಬ್ಯಾಂಕುಗಳು ಹಿರಿಯ ನಾಗರಿಕರಿಗೆ ಎಫ್‌ಡಿ ಮೇಲೆ ಹೆಚ್ಚಿನ ಬಡ್ಡಿ ನೀಡುತ್ತಿವೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿ ಕೇರ್ ಎಂಬ ಎಫ್‌ಡಿ ಯೋಜನೆಯನ್ನು ಪ್ರಾರಂಭಿಸಿದೆ. ಇದರ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿ ಮತ್ತು ಐಸಿಐಸಿಐ ಬ್ಯಾಂಕ್  ಗೋಲ್ಡನ್ ಇಯರ್ಸ್ ಎಂಬ ಯೋಜನೆಯನ್ನು ಪ್ರಾರಂಭಿಸಿದೆ.

ಹಿರಿಯ ನಾಗರಿಕರ ವಿಶೇಷ ಎಫ್‌ಡಿ ಯೋಜನೆ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯನ್ನು ಹೊಂದಿರುವ ಎಫ್‌ಡಿಗಳಿಗೆ ಅನ್ವಯಿಸುತ್ತದೆ. ಹೊಸ ಬಡ್ಡಿ ದರಗಳು ಹೊಸ ಅವಧಿಯ ಠೇವಣಿಗಳ ಜೊತೆಗೆ ಅಸ್ತಿತ್ವದಲ್ಲಿರುವ ಠೇವಣಿಗಳಿಗೂ ಅನ್ವಯವಾಗುತ್ತವೆ. ಹೊಸ ಎಫ್‌ಡಿ ಯೋಜನೆಗಳು ಸೆಪ್ಟೆಂಬರ್ 30 ರವರೆಗೆ ಮಾತ್ರ ಅನ್ವಯವಾಗುತ್ತವೆ. ಎಲ್ಲಾ ಮೂರು ಬ್ಯಾಂಕುಗಳು ಈ ಯೋಜನೆಗಳ ಅಡಿಯಲ್ಲಿ ಹಿರಿಯ ನಾಗರಿಕರಿಗೆ ಪ್ರಸ್ತುತ ಎಫ್‌ಡಿ ದರಗಳಿಗಿಂತ ಹೆಚ್ಚಿನ ದರದಲ್ಲಿ ಬಡ್ಡಿಯನ್ನು ಪಾವತಿಸುತ್ತಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...