alex Certify ವಿಶೇಷ ನೋಟುಗಳು ನಿಮ್ಮಲ್ಲಿದ್ದರೆ ಅಂತಹ ನೋಟುಗಳಿಗೆ ಸಿಗಲಿದೆ ದುಬಾರಿ ಹಣ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶೇಷ ನೋಟುಗಳು ನಿಮ್ಮಲ್ಲಿದ್ದರೆ ಅಂತಹ ನೋಟುಗಳಿಗೆ ಸಿಗಲಿದೆ ದುಬಾರಿ ಹಣ..!

ಸಾಮಾನ್ಯವಾಗಿ ಒಬ್ಬ ಮನುಷ್ಯ ಲಕ್ಷಾಧಿಪತಿಯಾಗುವ ಅಥವಾ ಕೋಟ್ಯಾಧಿಪತಿಯಾಗುವ ಕನಸು ಕಾಣೋದು ಸಹಜ. ಒಂದೇ ಬಾರಿಗೆ ಅದು ಸಾಧ್ಯವಿಲ್ಲ ಅಂತಾರೆ. ಆದರೆ ನಿಮ್ಮಲ್ಲಿರುವ ಒಂದು ನೋಟು ನಿಮ್ಮನ್ನು ಲಕ್ಷಾಧಿಪತಿ ಮಾಡಬಹುದು. ಅರೆ ಇದೇನಪ್ಪಾ ಅಂತ ಯೋಚನೆ ಮಾಡ್ತಾ ಇದ್ದೀರಾ..? ಹಾಗಾದ್ರೆ ಮುಂದೆ ಓದಿ.

ಹೌದು, ವಿಶೇಷ ನೋಟುಗಳಿಂದ ನೀವು ಲಕ್ಷಾಧಿಪತಿಯಾಗುವ ಅವಕಾಶವಿದೆ. ವಿಶೇಷ ಸರಣಿ ನೋಟುಗಳು, ವಿಶೇಷ ಸಂಖ್ಯೆ ಹೊಂದಿರುವಂತಹ ನೋಟುಗಳು, ಮಿಸ್ ಪ್ರಿಂಟ್ ಆಗಿರುವ ನೋಟುಗಳು, ವಿಶೇಷ ಸಹಿ ಮಾಡಿರುವಂತಹ ನೋಟುಗಳಿಗೆ ಹೆಚ್ಚಿನ ಬೆಲೆ ಕೊಟ್ಟು ಕೊಂಡುಕೊಳ್ಳಲಾಗುತ್ತದೆ. ಈ ಕೆಟಗರಿಯ ನೋಟುಗಳನ್ನು ಅಪರೂಪದ ನೋಟುಗಳೆಂದು ಪರಿಗಡಿಸಲಾಗುತ್ತದೆ.

ಇಂತಹ ನೋಟುಗಳನ್ನು ಇಬೇನಲ್ಲಿ ಬಿಡ್ ಮಾಡಲಾಗುತ್ತದೆ. ಈ ಬಿಡ್‌ನಲ್ಲಿ ಇಂತಹ ಅಪರೂಪದ ಕರೆನ್ಸಿ ನೋಟುಗಳನ್ನು ಹೆಚ್ಚಿನ ಹಣಕ್ಕೆ ಕೊಳ್ಳಲಾಗುತ್ತದೆ. ಉದಾಹರಣೆಗೆ ನೋಟುಗಳ ಮೇಲೆ 786 ಸಂಖ್ಯೆ ಇರುವುದು, 10 ರೂಪಾಯಿಯ ನೋಟುಗಳು ಒಂದೇ ಸರಣಿಯದಾಗಿದ್ದರೆ, ಅಥವಾ ತುಂಬಾ ಹಳೆಯ ನೋಟುಗಳು, ರಾಜರ ಕಾಲದಲ್ಲಿ ಮುದ್ರಿಸಿದ ನೋಟುಗಳಿಗೂ ಈ ಬಿಡ್‌ನಲ್ಲಿ ಹೆಚ್ಚಿನ ಬೇಡಿಕೆ ಇದೆ. ವೆಬ್‌ಸೈಟ್ ಮೂಲಕ ಈ ಬಿಡ್‌ನಲ್ಲಿ ಭಾಗವಹಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...