alex Certify ಲಾಕ್ ಡೌನ್ ಮಧ್ಯೆಯೂ ಹಿಟ್ ಆಯ್ತು ಈ ಬ್ಯುಸಿನೆಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಕ್ ಡೌನ್ ಮಧ್ಯೆಯೂ ಹಿಟ್ ಆಯ್ತು ಈ ಬ್ಯುಸಿನೆಸ್

ದೇಶದಲ್ಲಿ ಕೊರೊನಾ ಲಾಕ್ ಡೌನ್ ಹಿನ್ನಲೆಯಲ್ಲಿ ಆರ್ಥಿಕ ಮುಗ್ಗಟ್ಟು ಎದುರಾಗಿದೆ. ಅನೇಕ ವ್ಯಾಪಾರಸ್ಥರು ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ಆದ್ರೆ ಈ ಸಂದರ್ಭದಲ್ಲಿ ಹಾಲು ಹಾಗೂ ಹಾಲಿನ ಉತ್ಪನ್ನಕ್ಕೆ ಬೇಡಿಕೆ ಕಡಿಮೆಯಾಗಿಲ್ಲ. ಅಗತ್ಯ ವಸ್ತುಗಳ ಶ್ರೇಣಿಯಲ್ಲಿ ಬರುವ ಕಾರಣ ಹಾಲಿನ ಉತ್ಪನ್ನಗಳ ಮಾರಾಟ ಲಾಕ್ ಡೌನ್ ನಲ್ಲಿಯೂ ನಡೆದಿದೆ.

ಲಾಕ್‌ಡೌನ್‌ನಲ್ಲಿ ನೀವೂ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ ಹಾಲಿನ ಉತ್ಪನ್ನಗಳ ಘಟಕಗಳನ್ನು ಸ್ಥಾಪಿಸಬಹುದು. ಇದಕ್ಕಾಗಿ ಸರ್ಕಾರಗಳು ಸಾಲ ಮತ್ತು ಬೆಂಬಲವನ್ನೂ ನೀಡುತ್ತವೆ. ಮುದ್ರಾ ಯೋಜನೆಯಡಿ ಸಾಲ ಪಡೆಯಬಹುದು. ಶೇಕಡಾ70 ರಷ್ಟು ಸಾಲವನ್ನು ಸರ್ಕಾರ ನೀಡಲಿದೆ. ಹಾಲು ಅಥವಾ ಹಾಲಿನ ಉತ್ಪನ್ನಗಳ ಒಂದು ಘಟಕವನ್ನು ಪ್ರಾರಂಭಿಸಲು ಬಯಸಿದ್ರೆ ಪ್ರಧಾನ್ ಮಂತ್ರಿ ಮುದ್ರಾ ಯೋಜನೆ ಸಿದ್ಧಪಡಿಸಿದ ಪ್ರಾಜೆಕ್ಟ್ ಪ್ರೊಫೈಲ್ ಪ್ರಕಾರ, ನೀವು ಸುಮಾರು 16 ಲಕ್ಷ ರೂಪಾಯಿಗಳೊಂದಿಗೆ ಕೆಲಸ ಶುರು ಮಾಡಬಹುದು,

ಸುಮಾರು 5 ಲಕ್ಷ ರೂಪಾಯಿಗಳನ್ನು ನೀವು ಹೊಂದಿಸಬೇಕು. ಶೇಕಡಾ 70ರಷ್ಟು ಹಣವನ್ನು ಬ್ಯಾಂಕುಗಳು ಮುದ್ರಾ ಯೋಜನೆಯಡಿ ಸಾಲವನ್ನು ನೀಡಬಹುದು. ಇದರಲ್ಲಿ ಟರ್ಮ್ ಸಾಲವಾಗಿ 7.5 ಲಕ್ಷ ರೂಪಾಯಿ ಮತ್ತು ವರ್ಕಿಂಗ್ ಕ್ಯಾಪಿಟಲ್ ಸಾಲವಾಗಿ 4 ಲಕ್ಷ ರೂಪಾಯಿ ನೀಡುತ್ತದೆ .ಒಂದು ವರ್ಷದಲ್ಲಿ 82.50 ಲಕ್ಷ ರೂಪಾಯಿ ವಹಿವಾಟು ನಡೆಸಿದ್ರೆ ವೆಚ್ಚವೆಲ್ಲ ತೆಗೆದು ತಿಂಗಳಿಗೆ ನೀವು 65 ಸಾವಿರಕ್ಕೂ ಹೆಚ್ಚು ರೂಪಾಯಿಗಳನ್ನು ಗಳಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...