alex Certify ಬಿಎಸ್ಎನ್ಎಲ್ 20 ರೂ.ಗಿಂತ ಕಡಿಮೆ ಬೆಲೆ ಪ್ಲಾನ್ ನಲ್ಲಿ ಸಿಗ್ತಿದೆ 1.8 ಜಿಬಿ ಡೇಟಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಎಸ್ಎನ್ಎಲ್ 20 ರೂ.ಗಿಂತ ಕಡಿಮೆ ಬೆಲೆ ಪ್ಲಾನ್ ನಲ್ಲಿ ಸಿಗ್ತಿದೆ 1.8 ಜಿಬಿ ಡೇಟಾ

ಟೆಲಿಕಾಂ ಕಂಪನಿಗಳ ಮಧ್ಯೆ ಅಗ್ಗದ ಪ್ಲಾನ್ ನಲ್ಲಿ ಪೈಪೋಟಿಯಿದೆ. ಕಂಪನಿಗಳು ಗ್ರಾಹಕರನ್ನು ಸೆಳೆಯಲು ಅಗ್ಗದ ಪ್ಲಾನ್ ಜಾರಿಗೆ ತರ್ತಿವೆ. ಈಗ ಸರ್ಕಾರಿ ಟೆಲಿಕಾಂ ಕಂಪನಿ ಬಿಎಸ್‌ಎನ್‌ಎಲ್ ಕೂಡ ತನ್ನ ಗ್ರಾಹಕರಿಗೆ ಒಳ್ಳೆಯ ಸುದ್ದಿ ನೀಡಿದೆ. ಕಂಪನಿ ತನ್ನ ಇತ್ತೀಚಿನ ಕಾಂಬೊ 18 ರೂಪಾಯಿ ಪ್ರಿಪೇಯ್ಡ್ ರೀಚಾರ್ಜ್ ಅನ್ನು ಮತ್ತೊಂದು ವಲಯಕ್ಕೆ ಬಿಡುಗಡೆ ಮಾಡಿದೆ.

ಇದರಲ್ಲಿ ಗ್ರಾಹಕರಿಗೆ ಉಚಿತ ಕರೆ ಮಾಡುವ ಸೌಲಭ್ಯ ಸಿಗ್ತಿದೆ. ಬಿಎಸ್‌ಎನ್‌ಎಲ್‌ನ ಈ ಯೋಜನೆಯ ಸಿಂಧುತ್ವ 2 ದಿನಗಳು. ಬಳಕೆದಾರರು ಬಿಎಸ್ಎನ್ಎಲ್ ಸಂಖ್ಯೆಗಳು ಮತ್ತು ಇತರ ನೆಟ್ವರ್ಕ್ ಗೆ ಉಚಿತ ಕರೆ ಮಾಡುವ ಸೌಲಭ್ಯವನ್ನು ಪಡೆಯುತ್ತಾರೆ. ಬಿಎಸ್‌ಎನ್‌ಎಲ್‌ನ ಈ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 1.8 ಜಿಬಿ ಹೈಸ್ಪೀಡ್ ಡೇಟಾ ಸಿಗಲಿದೆ.

ದಿನದ ಡೇಟಾ ಮಿತಿ ಮುಗಿದ ನಂತರ ವೇಗವು 80ಕೆಬಿಪಿಎಸ್ ಆಗಲಿದೆ. ಬಿಎಸ್‌ಎನ್‌ಎಲ್‌ನ ಕಾಂಬೊ 18ರ ಯೋಜನೆಯು 250 ನಿಮಿಷಗಳ ಉಚಿತ ಕರೆ ನೀಡುತ್ತದೆ. ಕರ್ನಾಟಕ ಸೇರಿದಂತೆ 18 ವಲಯಗಳಿಗೆ ಲಭ್ಯವಿದ್ದ ಯೋಜನೆ ಇನ್ಮುಂದೆ ತಮಿಳುನಾಡಿಗೂ ಸಿಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...