alex Certify ಪಾನ್ ಕಾರ್ಡ್ ನಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾನ್ ಕಾರ್ಡ್ ನಲ್ಲಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಇಲ್ಲಿದೆ ಮಾಹಿತಿ

10 ಅಂಕಿಯ ಪಾನ್ ಕಾರ್ಡ್ ಈಗ ಅಗತ್ಯವಾಗಿದೆ. ಅನೇಕ ಕೆಲಸಗಳಿಗೆ ಪಾನ್ ಕಾರ್ಡ್ ದಾಖಲೆ ರೂಪದಲ್ಲಿ ಕೆಲಸ ಮಾಡುತ್ತದೆ. ಕೆಲವು ಯೋಜನೆಗಳ ಲಾಭ ಪಡೆಯಲು ಅನಿವಾರ್ಯವಾಗಿರುವ ಪಾನ್ ಕಾರ್ಡ್ ನಲ್ಲಿಯೇ ಅನೇಕ ಬಾರಿ ತಪ್ಪುಗಳಾಗಿರುತ್ತವೆ.

ಹೆಸರು, ಜನನ ದಾಖಲೆಗಳಲ್ಲಿ ಆಗುವ ತಪ್ಪು ಸಮಸ್ಯೆ ತಂದೊಡ್ಡುತ್ತದೆ.

ಪಾನ್ ಕಾರ್ಡ್ ನಲ್ಲಾದ ತಪ್ಪನ್ನು ಆದಷ್ಟು ಬೇಗ ಸರಿ ಮಾಡಿಕೊಳ್ಳಬೇಕು. ಆನ್ಲೈನ್ ಹಾಗೂ ಆಫ್ಲೈನ್ ಎರಡೂ ರೀತಿಯಲ್ಲಿ ಪಾನ್ ಕಾರ್ಡ್ ತಪ್ಪುಗಳನ್ನು ಸರಿ ಮಾಡಬಹುದು. ಮೊದಲು tin-nsdl.com ವೆಬ್ಸೈಟ್ ಗೆ ಲಾಗಿನ್ ಆಗಬೇಕು. ಅದ್ರ ಹೋಮ್ ಪೇಜ್ ನಲ್ಲಿ ಸರ್ವಿಸ್ ಸೆಕ್ಷನ್ ಕಾಣಿಸುತ್ತದೆ. ಅಲ್ಲಿ ಪಾನ್ ಮೇಲೆ ಕ್ಲಿಕ್ ಮಾಡಬೇಕು.

ಆಗ ಹೊಸ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ Change/Correction in PAN Data ಆಯ್ಕೆ ಸಿಗಲಿದೆ. ಅಲ್ಲಿ ಕೆಳಗೆ ಅಪ್ಲೈ ಮೇಲೆ ಕ್ಲಿಕ್ ಮಾಡಬೇಕು. ಪಾನ್ ಡೇಟಾದಲ್ಲಿ ಬದಲಾವಣೆ ಅಥವಾ ತಿದ್ದುಪಡಿ ಅಥವಾ ಪ್ಯಾನ್ ಕಾರ್ಡ್‌ನ ಮರುಮುದ್ರಣ ಆಯ್ಕೆ ಸಿಗಲಿದೆ. ಅಲ್ಲಿ Correct Category ಮೇಲೆ ಕ್ಲಿಕ್ ಮಾಡಬೇಕು.

ಅಲ್ಲಿ ನಿಮ್ಮ ಹೆಸರು, ದಿನಾಂಕವನ್ನು ಸುಲಭವಾಗಿ ತಿದ್ದುಪಡಿ ಮಾಡಬಹುದು. ವಿನಂತಿ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ಒಂದು ಅರ್ಜಿ ಫಾರ್ಮ್ ತೆರೆದುಕೊಳ್ಳುತ್ತದೆ. ಅದ್ರಲ್ಲಿ ಫೋಟೋ ಸೇರಿದಂತೆ ಅನೇಕ ಮಾಹಿತಿಯನ್ನು ಹಾಕಬೇಕಾಗುತ್ತದೆ. ಐಡಿ ದಾಖಲೆಯನ್ನೂ ನೀಡಬೇಕಾಗುತ್ತದೆ. ಪಾನ್ ನಂಬರ್ ಹಾಕಬೇಕಾಗುತ್ತದೆ. ಎಲ್ಲ ಮುಗಿದ ಮೇಲೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸಬೇಕಾಗುತ್ತದೆ. ಅದ್ರ ರಶೀದಿ ನಿಮಗೆ ಸಿಗುತ್ತದೆ. ಇದು ಸೇರಿದಂತೆ ಎಲ್ಲ ದಾಖಲೆಗಳನ್ನು NSDL e-Gov ಕಚೇರಿಗೆ ಸಲ್ಲಿಸಬೇಕು. ಈ ರೀತಿ ಪಾನ್ ಕಾರ್ಡ್ ನಲ್ಲಾದ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...