alex Certify ಜಿಯೋ ಗ್ರಾಹಕರಿಗೆ ಖುಷಿ ಸುದ್ದಿ: ಶುರುವಾಗಿದೆ ಜಿಯೋ ಮಾರ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಿಯೋ ಗ್ರಾಹಕರಿಗೆ ಖುಷಿ ಸುದ್ದಿ: ಶುರುವಾಗಿದೆ ಜಿಯೋ ಮಾರ್ಟ್

ರಿಲಾಯನ್ಸ್ ಜಿಯೋ ಇ-ಕಾಮರ್ಸ್ ಪೋರ್ಟಲ್ ಶುರುವಾಗಿದೆ. ಕಳೆದ ಕೆಲ ತಿಂಗಳಿಂದ ಇದ್ರ ಪರೀಕ್ಷೆ ನಡೆದಿತ್ತು. ನಿನ್ನೆ ಜಿಯೋ ಕಂಪನಿ ಪೋರ್ಟಲ್ ಅಧಿಕೃತವಾಗಿ ಶುರು ಮಾಡಿದೆ. ವೆಬ್ಸೈಟ್ ನಲ್ಲಿ ವಾಟ್ಸಾಪ್ ಮೂಲಕ ನೀವು ಖರೀದಿ ಶುರು ಮಾಡಬಹುದು.‌ ಸದ್ಯ ಮುಂಬೈ ಉಪನಗರಗಳಲ್ಲಿ ಮಾತ್ರ ಸೇವೆ ಲಭ್ಯವಿದೆ. ವಸ್ತುಗಳ ಎಂಆರ್ಪಿಗಿಂತ ಶೇಕಡಾ 5ರಷ್ಟು ಕಡಿಮೆ ಬೆಲೆಗೆ ವಸ್ತುಗಳು ಲಭ್ಯವಿದೆ.

ಸದ್ಯ ದಿನಸಿ ಸಾಮಾನುಗಳು ಮಾತ್ರ ಜಿಯೋ ಮಾರ್ಟ್ ನಲ್ಲಿ ಲಭ್ಯವಿದೆ. ತಾಜಾ ಹಣ್ಣುಗಳು, ತರಕಾರಿಗಳು, ಬೇಳೆಕಾಳುಗಳು, ಪ್ಯಾಕೇಜ್ ಮಾಡಿದ ಆಹಾರ ಮತ್ತು ಡೈರಿ ಉತ್ಪನ್ನಗಳನ್ನು ಜಿಯೋ ಮಾರ್ಟ್ ನಲ್ಲಿ ಖರೀದಿ ಮಾಡಬಹುದಾಗಿದೆ. ಪಿನ್ ಕೋಡ್ ಹಾಗೂ ವಾಟ್ಸಾಪ್ ಮೂಲಕ ವಸ್ತುಗಳನ್ನು ಖರೀದಿಸಲು ಕಂಪನಿ ಅವಕಾಶ ನೀಡಿದೆ.

ವಾಟ್ಸಾಪ್ ನಂಬರ್ 88500 08000 ನಂಬರ್ ಗೆ ಕರೆ ಮಾಡಿ ನಂಬರ್ ಸೇವ್ ಮಾಡಬೇಕು. ಮಾರ್ಟ್ ನಿಂದ ನಿಮಗೆ ಒಂದು ಮೆಸ್ಸೇಜ್ ಬರಲಿದೆ. ಲಿಂಕ್ ನಲ್ಲಿ ಉತ್ಪನ್ನಗಳ ಮಾಹಿತಿ ಸಿಗಲಿದೆ. ಈ ಲಿಂಕ್ 30 ನಿಮಿಷಗಳವರೆಗೆ ಸಕ್ರಿಯವಾಗಿರಲಿದೆ. ಅಲ್ಲಿ ನೀವು ಆರ್ಡರ್ ಮಾಡಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...