alex Certify ಖುಷಿ ಸುದ್ದಿ…! ಅಡಮಾನ ಇಡದೆ ಸ್ಟಾರ್ಟ್ಅಪ್ ಕಂಪನಿಗಳಿಗೆ ಸಿಗಲಿದೆ 5 ಕೋಟಿವರೆಗೆ ಸಾಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖುಷಿ ಸುದ್ದಿ…! ಅಡಮಾನ ಇಡದೆ ಸ್ಟಾರ್ಟ್ಅಪ್ ಕಂಪನಿಗಳಿಗೆ ಸಿಗಲಿದೆ 5 ಕೋಟಿವರೆಗೆ ಸಾಲ

ದೇಶದಲ್ಲಿ ಸೂಕ್ಷ್ಮ,ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಬಲಪಡಿಸಲು ಮತ್ತು ಧನಸಹಾಯ ಮಾಡಲು ಖಾಸಗಿ ವಲಯದ ಯಸ್ ಬ್ಯಾಂಕ್ ಮುಂದೆ ಬಂದಿದೆ. ಯಸ್ ಬ್ಯಾಂಕ್ ಎಂಎಸ್ಎಂಇ ಇನಿಶಿಯೇಟಿವ್’ ಆರಂಭಿಸಿದೆ. ಇದ್ರಡಿ ಸ್ಟಾರ್ಟ್ ಅಪ್ ಕಂಪನಿಗಳಿಗೆ ಬ್ಯಾಂಕ್ ಸುಲಭವಾಗಿ ಸಾಲ ನೀಡಲಿದೆ.

ಯಸ್ ಬ್ಯಾಂಕ್ ಈ ಯೋಜನೆಯಡಿ ಸ್ಟಾರ್ಟ್ ಅಪ್ ಕಂಪನಿಗಳು ಯಾವುದೇ ಆಸ್ತಿ, ಆಭರಣವನ್ನು ಅಡಮಾನ ಇಡದೆ 5 ಕೋಟಿ ರೂಪಾಯಿವರೆಗೆ ಸಾಲ ಪಡೆಯಬಹುದು. ಇದಲ್ಲದೆ ಎಂಎಸ್ಎಂಇಗಳಿಗೆ ನೀಡುವ ಸಾಲ ಸಂಸ್ಕರಣೆ ಸಮಯವನ್ನು ಕಡಿತಗೊಳಿಸುವ ಘೋಷಣೆ ಮಾಡಿದೆ. ಅಂದ್ರೆ ಬ್ಯಾಂಕ್ ಗ್ರಾಹಕರಿಗೆ ತಕ್ಷಣ ಸಾಲ ನೀಡಲಿದೆ.

ಆರ್ಥಿಕತೆಯಲ್ಲಿ ಸಣ್ಣ, ಸೂಕ್ಷ್ಮ ಹಾಗೂ ಮಧ್ಯಮ ಕೈಗಾರಿಕೆಗಳ ಪಾತ್ರ ಮಹತ್ವದ್ದು. ಎಂಎಸ್ಎಂಇ ದೇಶದ ಆರ್ಥಿಕತೆಯ ಬೆನ್ನೆಲುಬು. ಆರ್ಥಿಕತೆಯಲ್ಲಿ ಶೇಕಡಾ 30ರಷ್ಟು ಪಾಲು ಇದರದ್ದಿದೆ. ಈ ವಲಯವು ಈವರೆಗೆ 11 ಕೋಟಿ ಉದ್ಯೋಗವನ್ನು ಸೃಷ್ಟಿಸಿದೆ. ಈ ವಲಯದಲ್ಲಿ ಹೂಡಿಕೆ ಮಾಡುವ ಅಗತ್ಯವಿದೆ. ಸರ್ಕಾರದ ನೆರವಿನಿಂದ ಈ ವಲಯವನ್ನು ವಿಸ್ತರಿಸಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...